ನೀರಿನ ದಾಹ ನೀಗಿಸಲು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಗಣೇಶ ನಗರ ನಿವಾಸಿ 55 ವರ್ಷದ ಅಜ್ಜಿ ಗೌರಿ ನಾಯ್ಕ್ ಎಂಬುವವರು ಬಾವಿ ತೋಡಿ ಇನ್ನೇನು ನೀರು ಸಿಕ್ಕೇಬೀಡ್ತು ಎನ್ನುವಷ್ಟರಲ್ಲಿ ಅದೇ ಬಾವಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ ಎನ್ನುವ ಸುದ್ದಿ ಇದೀಗ ಹರಿದಾಡುತ್ತಿದೆ.
ಅಜ್ಜಿ ಬರೋಬ್ಬರಿ 20 ದಿನಗಳ ಸತತ ಪ್ರಯತ್ನದಿಮದ ಬಾವಿ ತೋಡುತ್ತಿದ್ರು. ಇವರ ನಿಸ್ವಾರ್ಥ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು.ಇದರಿಂದ ಊರವರು ಭಾರಿ ಸಂತಸ ವ್ಯಕ್ತ ಪಡಿಸಿದ್ದರು. ಆದ್ರೆ, ಅಜ್ಜಿ ತೋಡಿದ್ದ 30 ಅಡಿ ಆಳದ ಬಾವಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಹೀಗಾಗಿ ಅಜ್ಜಿ ಗೌರಿ ನಾಯ್ಕ ಕುಟುಂಬದವರು ಹಾಗೂ ಗ್ರಾಮಸ್ಥರು ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ತನಗೆ ಬಾವಿ ತೋಡಲು ಅವಕಾಶ ನೀಡಿ. ಇಲ್ಲವಾದ್ರೆ ಬಾವಿಯಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡುವೆ ಎಂದು ಎಚ್ಚರಿಕೆ ನೀಡಿದ್ದಾರೆ.
55 ವರ್ಷದ ಗೌರಿನಾಯ್ಕ್ ಅವರು ಕಳೆದ 20 ದಿನದಿಂದ ಬಾವಿ ತೋಡುತ್ತಿದ್ದರು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬಾವಿ ತೋಡುತ್ತಿದ್ರು. ಕಳೆದ 20 ದಿನದಿಂದ 30 ಅಡಿ ಬಾವಿ ತೋಡಿದ್ರು. ಗೌರಿನಾಯ್ಕ್ ಅವರ ಕಾರ್ಯಕ್ಕೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗಿತ್ತು. ಇನ್ನೂ ನಾಲ್ಕೈದು ದಿನ ಕಳೆದ್ರೆ ನೀರು ಬರ್ತಿತ್ತು. ಆದ್ರೆ, ಅಜ್ಜಿಯ ಕನಸು, ಮಕ್ಕಳ ದಾಹಕ್ಕೆ ಅಧಿಕಾರಿಗಳು ತಣ್ಣೀರೆರೆಚಿದ್ದಾರೆ.ಅಜ್ಜಿ ತೋಡಿದ್ದ ಬಾವಿಯನ್ನ ಹಲಗೆಯಿಂದ ಮುಚ್ಚಿಹಾಕಿರುವುದು ವಿಪರ್ಯಾಸವಾಗಿದೆ.


