ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಗ್ರಾ.ಪಂ. ಕೇಂದ್ರ ಸ್ಥಾನದಲ್ಲಿಯೇ ಸ್ವಚ್ಚತೆಯೇ ಮರಿಚೀಕೆಯಾಗಿದ್ದು, ಸಾಮಾನ್ಯ ಜನರು ಸಾಂಕ್ರಮಿಕ ರೋಗದ ಭೀತಿಯಲ್ಲಿ ವಾಸಿಸುವಂತಹ ಪ್ರಸಂಗ ಎದುರಾಗಿದೆ.
ಹೊಳವನಹಳ್ಳಿ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಚ್ಛತೆ ಮಾಯಾವಾಗಿದ್ದು, ಗ್ರಾಮದಲ್ಲಿ ಚರಂಡಿ ಸ್ವಚ್ಛತೆ, ಜನಸಂದಣಿ ಪ್ರದೇಶಗಳಲ್ಲಿ ಕಸದ ರಾಶಿ, ದಿನಸಿ ಅಂಗಡಿಗಳ ಪ್ಲಾಸ್ಟಿಕ್ ವಸ್ತುಗಳು, ಬೇಕರಿ ಪದಾರ್ಥ, ತರಕಾರಿ ಅಂಗಡಿಗಳ ತ್ಯಾಜ್ಯ ಕಸ, ಹೋಟೆಲ್ ಗಳ ಪ್ಲಾಸ್ಟಿಕ್ ವಸ್ತುಗಳೇ ಹೆಚ್ಚು. ಆದರೆ, ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿಯೇ ಸ್ವಚ್ಛತೆ ಮರೀಚಿಕೆಯಾಗಿದೆ ಇನ್ನೂ ಸಾರ್ವಜನಿಕರ ಕೆಲಸ ಹೇಗೆ ನಡೆಯುತ್ತಿದೆ ಎಂದು ಪ್ರಜ್ಞಾವಂತ ನಾಗರೀಕರು ಪ್ರಶ್ನಿಸುತ್ತಿದ್ದಾರೆ.
ಎಲ್ಲೆಲ್ಲಿ ಸಮಸ್ಯೆ: ಮುಖ್ಯವಾಗಿ ರೈತ ಸಂಪರ್ಕ ಕೇಂದ್ರ, ಪ.ಜಾತಿ ಸಮುದಾಯ ಭವನ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಕಚೇರಿ ಮುಂಭಾಗ, ಸರ್ಕಾರಿ ಪಿಯು ಕಾಲೇಜು ಮುಂಭಾಗ, ಹಿಂದಿನ ಎಸ್‌ಬಿಐ ಬ್ಯಾಂಕ್ ವೃತ್ತ ಈಗೇ ಹಲವು ಜನಸಂದಣಿ ಪ್ರದೇಶಗಳಲ್ಲಿ ಸ್ವಚ್ಚಗೊಳಿಸಿ ಸುಮಾರು ವರ್ಷಗಳೇ ಕಳೆಯುತ್ತಲೇ ಬಂದಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಎಸ್ ಸಿ ಕಾಲೋನಿ ಸ್ವಚ್ಛಗೊಳಿಸಿ ವರ್ಷವಾಗಿದೆಯಂತೆ..!
ಹೊಳವನಹಳ್ಳಿ ಹೋಬಳಿ ಕೇಂದ್ರ ಸ್ಥಾನ ತಾಲೂಕಿನ ಹೃದಯ ಭಾಗದಲ್ಲಿದೆ. ಈ ಗ್ರಾಮದಲ್ಲಿ ಮೂಲಭೂತವಾಗಿ ಸ್ವಚ್ಛತೆಯೇ ಇಲ್ಲಾ, ಅಧಿಕಾರಿಗಳು ಒಂದು ದಿನಕ್ಕೂ ಸ್ಥಳಕ್ಕೆ ಬಂದು ಸಮಸ್ಯೆ ಬಗ್ಗೆ ಕೇಳಿಲ್ಲಾ, ಇರುವಂತಹ ಸಮಸ್ಯೆಯನ್ನು ಬಗೆಹರಿಸಿಲ್ಲಾ, ಗ್ರಾ.ಪಂ ಆವರಣ, ಅಕ್ಕ-ಪಕ್ಕ ಬೀದಿಯಲ್ಲಿ ಸ್ವಚ್ಚತೆ ಮಾಡಿಕೊಳ್ತಾರೆ, ಈಗೇ ಆದರೆ ಸಾಮಾನ್ಯ ಜನರ ಪಾಡೇನು? ಎಸ್ಸಿ ಕಾಲೋನಿಯಲ್ಲಿ ಸ್ವಚ್ಛಗೊಳಿಸಿಯೇ ವರ್ಷವಾಗಿದೆ, ಸ್ವಚ್ಛತೆಗೆ ಅಧಿಕಾರಿಗಳ ಬೇಜಾವಾಬ್ದಾರಿತನ ಹೆಚ್ಚಾಗಿ ಕಾಣುತ್ತಿದೆ ಎಂದು ಎಸ್ಸಿ ಕಾಲೋನಿ ಮಹಿಳೆಯರು ಆರೋಪ ಮಾಡುತ್ತಿದ್ದಾರೆ.
“ದೇವಾಲಯವಿದೆ ಸ್ವಚ್ಛತೆ ಕಾಪಾಡುವಂತೆ ನಾವೇ ನಾಮಫಲಕ ಹಾಕಿದರೂ ಕಸದ ರಾಶಿ ಮಾತ್ರ ತಪ್ಪಿಲ್ಲಾ, ಗ್ರಾ.ಪಂ ಅಧಿಕಾರಿಗಳು ಊರಲ್ಲಿ ಇದಾರೋ ಇಲ್ವೋ ಎಂಬುದೇ ನಮಗೆ ಗೊತ್ತಿಲ್ಲಾ, ಎಸ್ಸಿ ಕಾಲೋನಿ ಜನರು ಸಾಂಕ್ರಮಿಕ ರೋಗದ ಭೀತಿಯಲ್ಲಿ ಪ್ರತಿನಿತ್ಯ ವಾಸಿಸುತ್ತಿದ್ದಾರೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವಲ್ಲಿ ಗ್ರಾ.ಪಂ ಅಧಿಕಾರಿಗಳು ವಿಫಲರಾಗಿದ್ದಾರೆ.
— ಉಮೇಶ್, ಯುವ ಮುಖಂಡ, ಹೊಳವನಹಳ್ಳಿ.
ನಮಗೆ ಆರೋಗ್ಯ ಮೊದಲೇ ಸರಿ ಇಲ್ಲಾ, ಚರಂಡಿ ದುರ್ವಾಸನೆಯೇ ಮಧ್ಯೆಯೇ ನಾವುಗಳು ವಾಸಿಸಬೇಕು, ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು, ಎಸ್ಸಿ ಜಾತಿಯವರ ಸಮುದಾಯ ಭವನ ಮುಂದೆಯೇ ರಾತ್ರಿ ವೇಳೆ ಮೂತ್ರ ವಿಸರ್ಜನೆ ಮಾಡ್ತಾರೆ, ಆರೋಗ್ಯ ಸಮಸ್ಯೆಯಿಂದ ಮನೆಯಿಂದ ಹೊರಬರುವುದಕ್ಕೂ ಕಷ್ಟವಾಗಿದೆ.
— ಗಂಗಮ್ಮ, ವೃದ್ಧೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


