ತಿಪಟೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಬರುವಂತೆ ಕ್ರಮಕೈಗೊಂಡಿರುವ ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗುವ ಮೂಲಕ ಡಾ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಅಭಿನಂದನೆ ಸಲ್ಲಿಸಿತು.
ಬಿ.ಸಿ. ನಾಗೇಶ್ ರವರ ಗೃಹ ಕಚೇರಿಗೆ ಭೇಟಿ ನೀಡಿದ ಸಂಘಟನೆಯ ಮುಖಂಡರು ಸರ್ಕಾರಕ್ಕೆ ಸಚಿವರ ಮೂಲಕ ಅಭಿನಂದನೆಗಳನ್ನು ತಿಳಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷರಾದ ಮತ್ತಿಘಟ್ಟ ಶಿವಕುಮಾರ್, ಕಳೆದ 25– 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬರುತ್ತಿದ್ದು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಬರುವಂತೆ ಮಾಡಿರುವ ಹಾಗೂ ಕಳೆದ ಮೂರು ತಿಂಗಳ ಹಿಂದೆ ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಹಾಗೂ ಸಮುದಾಯದ ಸ್ವಾಮೀಜಿಗಳಾದ ಮಾಧಾರ ಚೆನ್ನಯ್ಯ ಸ್ವಾಮಿಜಿ ಅವರಿಗೂ ಎಲ್ಲಾ ನನ್ನ ಎಲ್ಲಾ ದಲಿತ ಸಂಘಟನೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ. ತಾಲ್ಲೂಕು ಉಪಾಧ್ಯಕ್ಷರಾದ ಗುರುಗದಹಳ್ಳಿ ಮಂಜುನಾಥ್, ತಾಲೂಕು ಸಂಘಟನಾ ಅಧ್ಯಕ್ಷರಾದ ಅಶೋಕ್ ಬಳ್ಳೇಕೆರೆ, ತಾಲೂಕು ಖಜಾಂಚಿ ಭರತ್ ಕುಮಾರ್, ತಾಲೂಕ್ ಕಾರ್ಯದರ್ಶಿ ಮಂಜುನಾಥ್, ಕಾರ್ಯದರ್ಶಿ ಮತ್ತಿಘಟ್ಟ ಮಂಜುನಾಥ್, ಮಡೆನೂರು ಮಂಜು ಗ್ರಾಮ ಶಾಖೆ ಅಧ್ಯಕ್ಷ ಪ್ರಕಾಶ್, ಶಿವಣ್ಣ ಸೇರಿದಂತೆ ಪ್ರಮುಖ ಕಾರ್ಯಕರ್ತರು ಹಾಜರಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy