ಬೆಂಗಳೂರು: 70 ವರ್ಷದ ವೃದ್ಧನೊಬ್ಬ ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ನಂತರ ಮದುವೆಗೆ ನಿರಾಕರಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ 63 ವರ್ಷದ ವೃದ್ಧೆಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ನೊಂದ ವೃದ್ಧೆ ನೀಡಿರುವ ದೂರಿನನ್ವಯ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೃದ್ಧೆಯನ್ನು ಯಾಮಾರಿಸಿ ಮೂರೂವರೆ ಕೋಟಿ ರೂಪಾಯಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದ ಆರೋಪಿಗಳನ್ನು ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. 63 ವರ್ಷದ ಶಾಂತಾ ಎಂಬವರಿಗೆ ವಂಚಿಸಿದ್ದ ಅಪೂರ್ವ ಯಾದವ್, ಈಕೆಯ ತಾಯಿ ವಿಶಾಲ, ಸ್ನೇಹಿತೆ ಅರುಂಧತಿ ಹಾಗೂ ಪತಿ ರಾಕೇಶ್ ಬಂಧಿತರು.
ಪ್ರಕರಣದ ವಿವರ: ಬನಶಂಕರಿ 2ನೇ ಹಂತದ ಪದ್ಮನಾಭನಗರದಲ್ಲಿ ವಾಸವಿದ್ದ ವೃದ್ಧೆ ಶಾಂತಾ ಅವರ ಪತಿ ಇತ್ತೀಚೆಗಷ್ಟೆ ತೀರಿಕೊಂಡಿದ್ದರು. ಶಾಂತಾ ಮತ್ತು ಅವರ ಪುತ್ರಿ ಮಾತ್ರ ಮನೆಯಲ್ಲಿ ವಾಸವಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಅರುಂಧತಿ ಮತ್ತು ರಾಕೇಶ್ ದಂಪತಿ ಇನ್ಸುರೆನ್ಸ್ ಪಾಲಿಸಿ ಮಾಡಿಸುವ ನೆಪದಲ್ಲಿ ಶಾಂತಾರನ್ನು ಪರಿಚಯಿಸಿಕೊಂಡಿದ್ದಾರೆ. ಬಳಿಕ ‘ನಿಮ್ಮ ಮನೆಯಲ್ಲಿ ದೋಷ ಇದೆ, ಮಾರಾಟ ಮಾಡಿ ಬಿಡಿ’ ಎಂದು ನಂಬಿಸಿ, ತಾವೇ ಬ್ರೇಕರ್ ಮತ್ತು ಖರೀದಿದಾರರನ್ನು ಕರೆಸಿಕೊಂಡು ಮಾರಾಟ ಮಾಡಿಸಿದ್ದರು. ಮನೆ ಮಾರಾಟದಿಂದ ಮೂರುವರೆ ಕೋಟಿ ರೂ ಹಣ ಶಾಂತಾರ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ವೃದ್ಧೆಯನ್ನು ಯಾಮಾರಿಸಿ ಈ ಹಣವನ್ನು ಲಪಟಾಯಿಸಿದ್ದರು. ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.


