ಅಮೆರಿಕದ ರಾಜಧಾನಿ ವಾಷಿಂಗ್ಟನ್ ನಲ್ಲಿ ಒಂದು ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ದತ್ತು ತಾಯಿ ಕಾರಿನಲ್ಲಿ ಬಿಟ್ಟು ಹೋಗಿದ್ದ ಮಗು ಬಿಸಿಲಿನ ತಾಪಕ್ಕೆ ಬಲಿಯಾಗಿದೆ. ಮಗು ಒಂಬತ್ತು ಗಂಟೆಗೂ ಹೆಚ್ಚು ಕಾಲ ಕಾರಿನಲ್ಲೇ ಇತ್ತು. ಮಗು ಕಾರಿನಲ್ಲಿದೆ ಎಂಬುದನ್ನು ಮರೆತಿದ್ದೇನೆ ಎಂದು ಸಾಕು ತಾಯಿ ಹೇಳಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ವಾಷಿಂಗ್ಟನ್ ನ ಗುಡ್ ಸಮರಿಟನ್ ಆಸ್ಪತ್ರೆಗೆ ಕೆಲಸಕ್ಕೆ ಬಂದಾಗ ಸಾಕು ತಾಯಿ ಮಗುವನ್ನು ಕಾರಿನಲ್ಲಿ ಬಿಟ್ಟು ಹೋಗಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಪಾಳಿ ಮುಗಿಸಿ ಹಿಂತಿರುಗುವಷ್ಟರಲ್ಲಿ ಮಗು ಮೃತಪಟ್ಟಿತ್ತು. ಕಾರಿನಲ್ಲಿ ಮಗು ಇರೋದು ಮರೆತು ಹೋಗಿತ್ತು ಎಂದು ಸಾಕು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಸಿಎನ್‌ಎನ್ ವರದಿ ಮಾಡಿದ್ದು, ತೀವ್ರ ಶಾಖದಿಂದಾಗಿ ಮಗು ಸಾವನ್ನಪ್ಪಿದೆ. ಟಕೋಮಾದ ಆಗ್ನೇಯದಲ್ಲಿರುವ ಪುಯಲ್ಲಪ್ ನಲ್ಲಿ ತಾಪಮಾನವು 70 ರಿಂದ 75 ಡಿಗ್ರಿಗಳ ನಡುವೆ ಇತ್ತು, ಆದರೆ ಹುಡುಗ ಪತ್ತೆಯಾದಾಗ ಕಾರಿನ ಒಳಗಿನ ತಾಪಮಾನ 110 ಡಿಗ್ರಿ ಎಂದು ವರದಿ ಹೇಳಿದೆ.
ಸಾಕು ತಾಯಿ ಆಸ್ಪತ್ರೆಯಲ್ಲಿ ಸಾಮಾಜಿಕ ಕಾರ್ಯಕರ್ತೆ. ಅವರು ಮತ್ತು ಅವರ ಕುಟುಂಬದವರು ತನಿಖೆಗೆ ಸಹಕರಿಸುತ್ತಿದ್ದಾರೆ ಮತ್ತು ಯಾವುದೇ ಆರೋಪಗಳನ್ನು ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


