ತಿಪಟೂರು: ಜನಪದ ಹೆಜ್ಜೆಸಂಸ್ಥೆ ಹಾಗೂ ಸತ್ಯ ಗಣಪತಿ ಸೇವಾ ಟ್ರಸ್ಟ್ ಮತ್ತು ಇತರೆ ಹಲವು ಸಂಘ ಸಂಸ್ಥೆಗಳು ಸಾರ್ವಜನಿಕರ ಸಹಕಾರದೊಂದಿಗೆ ಎರಡನೇ ಬಾರಿ ಜುಲೈ 13ರ ಶನಿವಾರ ಹಾಗೂ 14ರ ಭಾನುವಾರ ಶ್ರೀ ಸತ್ಯ ಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಹಲಸಿನ ಹಬ್ಬ ಆಚರಣೆ ಮಾಡಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಸಿರಿಗಂಧ ಗುರು ತಿಳಿಸಿದರು .
ಬೆಳಿಗ್ಗೆ 9 ಯಿಂದ ರಾತ್ರಿ 9ವರೆಗೆ ಎರಡು ದಿನಗಳ ಕಾಲ ಹಲಸಿನ ಹಬ್ಬದ ಪ್ರಯುಕ್ತ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಹಲಸಿನ ಅಡುಗೆ ಸ್ಪರ್ಧೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಲ್ಪತರು ನಾಡಿನಲ್ಲಿ ತೆಂಗಿನ ಪರ್ಯಾಯ ಬೆಳೆಯಾಗಿ ಹಲಸಿನ ಬೆಳೆ ಬೆಳೆಯುತ್ತಿದ್ದು, ಒಂದು ಮಾರುಕಟ್ಟೆಯ ಸೃಷ್ಟಿಯಾಗಿದೆ ಎಂದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆರಗೋಡಿರಂಗಾಪುರ ಸುಕ್ಷೇತ್ರದ ಶ್ರೀ ಗುರು ಪರದೇಶಿ ಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಲಿದ್ದು, ಶಾಸಕ ಕೆ.ಷಡಕ್ಷರಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪ ವಿಭಾಗ ಅಧಿಕಾರಿ ಸಪ್ತಶ್ರೀ ಸತ್ಯ ಗಣಪತಿ ಸೇವಾ ಸಂಘದ ಅಧ್ಯಕ್ಷರಾದ ಬಿ.ಹಾರ್ ಶ್ರೀಕಂಠ ಕೆ.ವಿ.ಕೆ., ಕೊನೆಹಳ್ಳಿ ಮುಖ್ಯಸ್ಥ ಗೋವಿಂದೇಗೌಡ, ಸಹಾಯಕ ತೋಟಗಾರಿಕೆ ನಿರ್ದೇಶಕರು ಭಾಗವಹಿಸಲಿದ್ದಾರೆ ಎಂದು ಸೊಗಡು ಜನಪದ ಸಂಸ್ಥೆಯ ಅಧ್ಯಕ್ಷ ಶ್ರೀಗಂಧ ಗುರು ತಿಳಿಸಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA