ತುಮಕೂರು: ಗುಜರಾತ್ ರಾಜ್ಯದಲ್ಲಿ ರಾಜ್ಯಪಾಲರನ್ನು ಗೌರವಾನ್ವಿತ ಎಂಬುದಾಗಿ ಇರಿಸಿ, ಎಲ್ಲಾ ಅಧಿಕಾರವನ್ನು ಅದ್ರಲ್ಲಿ ಕುಲಸಚಿವ, ರಿಜಿಸ್ಟ್ರಾರ್ ನೇಮಕಾತಿ ಸೇರಿದಂತೆ ವಿಶ್ವವಿದ್ಯಾಲಯಗಳ ಪ್ರತಿಯೊಂದು ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿ ಸರಕಾರದ ಸುಪರ್ಧಿಗೆ ತೆಗೆದುಕೊಂಡರು. ಅದೇ ರೀತಿ ಗುಜರಾತ್ ಮಾಡೆಲ್ ಅನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಂಡು, ಪ್ರಸ್ತುತ ಆರ್ ಡಿಪಿ ಆರ್ ವಿಶ್ವ ವಿದ್ಯಾಲಯಕ್ಕೆ ಮುಖ್ಯಮಂತ್ರಿಗಳು ಕುಲಪತಿಗಳನ್ನಾಗಿ ನೇಮಕ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದನದಲ್ಲಿ ಇದಕ್ಕೆ ಸಂಬಂಧಿಸಿದ ಆಕ್ಟ್ ಗಳನ್ನು ಮಂಡಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಆರ್ ಡಿಪಿ ಆರ್ ವಿವಿಯಲ್ಲಿ ಮುಖ್ಯಮಂತ್ರಿಗಳನ್ನು ಕುಲಪತಿಗಳನ್ನಾಗಿ ಮಾಡಿ ಜಾರಿಗೆ ತರಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲಾ ವಿವಿ ಗಳಿಗೆ ವಿಸ್ತರಿಸಬಹುದಾಗಿದೆ ಎಂದರು.
ಗುಜರಾತ್ ಮಾಡೆಲ್ ಉತ್ತಮವಾಗಿದೆ ಎಂದರೆ, ಅದನ್ನು ಮಾಡಬಹುದಾಗಿದೆ. ಅಲ್ಲದೆ ನಮ್ಮ ರಾಜ್ಯವನ್ನು ಅವರು ಕೂಡ ಎಷ್ಟೊಂದು ಯೋಜನೆಗಳನ್ನು ಅನುಕರಣೆ ಮಾಡಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿವಿಯಲ್ಲಿನ ಬದಲಾವಣೆಯನ್ನು ನಾವು ಅನುಕರಿಸಿದ್ದೇವೆ. ಯಾವುದನ್ನು ವಿರೋಧಿಸಬೇಕು ಎಂದು ಇದ್ದರೆ ಇಂದಿಗೂ ಅದನ್ನು ವಿರೋಧಿಸುತ್ತೇವೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx