ಸರಗೂರು: ಶಾಸಕ ಅನೀಲ್ ಚಿಕ್ಕಮಾದು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಿರುವ ಬಗ್ಗೆ ತಾಲೂಕಿನ ಜನತೆ ಮತ್ತು ಸಾರ್ವಜನಿಕರಿಗೆ ಗೊತ್ತು. ಶಾಸಕರ ವಿರುದ್ಧ ಟೀಕೆ ಮಾಡುವವರಿಗೆ ಏನು ಗೊತ್ತು, ತಾಲ್ಲೂಕಿನಲ್ಲಿ ವಿರೋಧ ಮಾಡುವರು ಇದ್ದರೆ ಮಾತ್ರ ಶಾಸಕರಿಗೆ ಇನ್ನಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಲು ಸಾಧ್ಯ ಎಂದು ಕೋತ್ತೆಗಾಲ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿರೋಧ ಪಕ್ಷಗಳು ಟೀಕೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಅವರು ಏನೂ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ತಾಲೂಕಿನಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು, ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.
ಅನೀಲ್ ಚಿಕ್ಕಮಾದು ರವರು ತಂದೆ ಕಾಲದಿಂದಲೂ ಜಾತಿ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಅವರು ಪಕ್ಷಾತೀತವಾಗಿ ಜನರ ಸೇವೆಯಲ್ಲಿ ಹೆಚ್ಚಿನ ತೊಡಗಿಸಿಕೊಂಡು ಬರುತ್ತಿದ್ದಾರೆ. ತಾಲ್ಲೂಕಿನ ಜನರಿಗೆ ಯಾವುದೇ ಸಮಯದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಗಮನಕ್ಕೆ ಬಂದ ಕೂಡಲೇ ಅವರು ಆಸ್ಪತ್ರೆಗೆ ಹಾಗೂ ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿದ್ದಾರೆ. ಅವರ ಬಗ್ಗೆ ಮಾತನಾಡಲು ವಿರೋಧಿಗಳಿಗೆ ಯೋಗ್ಯತೆ ಇರಬೇಕು ಎಂದರು.
ಶಾಸಕರ ವಿರೋಧಿಗಳಿಗೆ ಒಂದು ಸವಾಲ್ ನಿಮಗೆ ಶಾಸಕರು ಅಭಿವೃದ್ಧಿ ಕೆಲಸ ಮಾಡಿಲ್ಲ ಹಾಗೂ ರೆಸಾರ್ಟ್ ಗಳನ್ನು ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರಲ್ಲ ಬನ್ನಿ ನಮ್ಮ ಗ್ರಾಮದಲ್ಲಿ ಅಭಿವೃದ್ಧಿ ಮಾಡಿರುವ ಕೆಲಸವನ್ನು ನೋಡಿಕೊಂಡು ಹೋಗಿ ಎಂದು ಸವಾಲ್ ಹಾಕಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


