ಮಧುಗಿರಿ: ಕೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದ ಪ್ಲೆಕ್ಸ್ ಕಟ್ಟುತ್ತಿದ್ದ ಕಾರ್ಮಿಕರಿಗೆ ವಿದ್ಯುತ್ ತಗಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಟ್ಟಣದ ಡಿಡಿಪಿಐ ಕಚೇರಿ ಬಳಿ ಕಂಬಕ್ಕೆ ಫ್ಲೆಕ್ಸ್ ಕಟ್ಟುತಿದ್ದ ಕಾರ್ಮಿಕರಾದ ಶಂಕ್ರಪ್ಪ ಮತ್ತು ಹಿಮಾಚಲ ಇಬ್ಬರಿಗೂ ವಿದ್ಯುತ್ ತಗಲಿ ಗಾಯಗೊಂಡಿದ್ದು, ಕೂಡಲೇ ಮದುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಗಂಭೀರವಾಗಿ ಗಾಯಗೊಂಡ ಶಂಕ್ರಪ್ಪಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ, ಕಾರ್ಮಿಕ ಹಿಮಾಚಲ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದ ಜಿಲ್ಲಾಧಿಕಾರಿ ಶ್ರೀನಿವಾಸ್, ಸಿಇಒ ಜಿ.ಪ್ರಭು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ವರದಿ: ಅಬಿದ್ ಮಧುಗಿರಿ