ಮೈಸೂರು: ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಹೆಸರನ್ನ ವಿರೋಧಿಸುತ್ತಾರೆ ಅಂತ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ನೀಡಿರುವ ಹಳೇ ಹೇಳಿಕೆಗೂ ಇದಕ್ಕೂ ಏನು ಸಂಬಂಧ? ಬಿಜೆಪಿ ಕುಂಟು ನೆಪ ಹುಡುಕುತ್ತಿದ್ದಾರೆ ಅಷ್ಟೇ. ಯಾವತ್ತೋ ಏನೋ ಹೇಳಿದ್ದಾರೆ ಅಂತ ಅದನ್ನ ಇಲ್ಲಿಗೆ ಲಿಂಕ್ ಮಾಡುವುದು ಎಷ್ಟು ಸರಿ? ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ ಎಂದು ತಿರುಗೇಟು ನೀಡಿದರು.
ಬೆರಳಣಿಕೆಯ ಮಂದಿಗೆ ಮಾತ್ರ ಬೂಕರ್ ಪ್ರಶಸ್ತಿ ಬಂದಿದೆ. ನಾನೇ ಅವರ ಹೆಸರನ್ನ ಆಯ್ಕೆ ಮಾಡಿದ್ದೇನೆ. ಉದ್ಘಾಟಕರು ದನ ತಿನ್ನುವುದನ್ನ ಬಿಜೆಪಿಯವರು ನೋಡಿದ್ದಾರಾ? ಅವರನ್ನ ವಿರೋಧಿಸಲೇಬೇಕೆಂದು ವಿರೋಧ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC