ಒಂಟಿಯಾಗಿ ಬರುವ ಮಹಿಳೆಯರಿಗೆ ದಿಲ್ಲಿಯ ಜಾಮಾ ಮಸೀದಿ ಆಡಳಿತ ಪ್ರವೇಶ ನಿರಾಕರಿಸಿದೆ. ಒಂಟಿಯಾಗಿ ಬರುವ ಮಹಿಳೆಯರಿಗೆ ಮಾತ್ರವೇ ನಿರ್ಬಂಧ ಅನ್ವಯವಾಗುತ್ತದೆ.
ಕುಟುಂಬದೊಂದಿಗೆ ಅಥವಾ ಪತಿಯೊಂದಿಗೆ ಬರುವ ಮಹಿಳೆಯರಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ಜಾಮಾ ಮಸೀದಿ ಪಿಆರ್‌ಒ ಸಬಿವುಲ್ಲಾ ಖಾನ್ ಸ್ಪಷ್ಟಪಡಿಸಿದ್ದಾರೆ. ಮಸೀದಿ ಆವರಣದಲ್ಲಿ ನಡೆಯುವ ಅನುಚಿತ ವರ್ತನೆಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
ಮಸೀದಿಗೆ ಮಹಿಳೆಯರು ಪ್ರವೇಶಿಸದಂತೆ ನಿಷೇಧ ಹೇರಿಲ್ಲ. ಮಹಿಳೆಯರು ಒಬ್ಬಂಟಿಯಾಗಿ ಬಂದಾಗ ಅನುಚಿತವಾಗಿ ವರ್ತಿಸುವುದು, ಟಿಕ್ ಟಾಕ್‌ಅಥವಾ ಡಾನ್ಸ್‌ವಿಡಿಯೊಗಳನ್ನು ಚಿತ್ರೀಕರಿಸುವುದು ವರದಿಯಾಗುತ್ತಿವೆ. ಇವುಗಳಿಗೆ ತಡೆಯೊಡ್ಡುವುದಕ್ಕಾಗಿ ನಿಷೇಧ ಹೇರಲಾಗಿದೆ.
ಕುಟುಂಬದೊಂದಿಗೆ ಬರುವವರಿಗೆ ಅಥವಾ ದಂಪತಿಗೆ ಯಾವುದೇ ನಿರ್ಬಂಧ ಇಲ್ಲ. ಧಾರ್ಮಿಕ ತಾಣವನ್ನು ಹುಡುಗರು, ಹುಡುಗಿಯರ ಭೇಟಿ ಸ್ಥಳವನ್ನಾಗಿಸುವುದು ತರವಲ್ಲ ಎಂದು ಹೇಳಿದ್ದಾರೆ.
ಮಸೀದಿಯ ಈ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ದಿಲ್ಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಅಧ್ಯಕ್ಷೆ ಸ್ವಾತಿ ಮಲಿವಾಲ್‌ಅಸಮಾಧಾನ ವ್ಯಕ್ತಪಡಿಸಿದ್ದು, ವಿವರಣೆ ಕೇಳಿ ಮಸೀದಿಯ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


