ತುಮಕೂರು: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಸ್ವಚ್ಚ ಭಾರತ ಅಭಿಯಾನದಡಿ ತುಮಕೂರು ನಗರವನ್ನು 3 Star ಬಯಲು ಶೌಚ ಮುಕ್ತ+ (ಓ.ಡಿ.ಎಫ್+) ನಗರವೆಂದು ಕಳೆದ ಸಾಲಿನಲ್ಲಿ ಘೋಷಿಸಿ ಪ್ರಮಾಣೀಕರಿಸಿದೆ.
ಪ್ರಸ್ತುತ ಪಾಲಿಕೆಯು ನಗರವನ್ನು ಬಯಲು ಶೌಚಮುಕ್ತ+ ನಗರದಿಂದ “5 Star” ಬಯಲು ಶೌಚಮುಕ್ತ++ (ಓ.ಡಿ.ಎಫ್++) ನಗರವೆಂದು ಘೋಷಿಸಿ ಉನ್ನತೀಕರಿಸಲು ಉದ್ದೇಶಿಸಿದ್ದು, “5 Star ” ಬಯಲು ಶೌಚಮುಕ್ತ++ (ಓ.ಡಿ.ಎಫ್++) ನಗರವೆಂದು ಘೋಷಿಸುವ ಬಗ್ಗೆ ಆಕ್ಷೇಪಣೆ ಹಾಗೂ ಪ್ರತಿಕ್ರಿಯೆ ಇದ್ದಲ್ಲಿ ಸಾರ್ವಜನಿಕರು ನವೆಂಬರ್ 22ರೊಳಗಾಗಿ ಮಹಾನಗರಪಾಲಿಕೆ ಆಯುಕ್ತರ ಕಚೇರಿಗೆ ಸಲ್ಲಿಸಬಹುದೆಂದು ಆರೋಗ್ಯಾಧಿಕಾರಿ ವೀರೇಶ್ ಕಲ್ಮಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q