ಡ್ರಗ್ಸ್ ದಂಧೆಕೋರರ ಹೊಸ ವಿಧಾನ ಕಂಡುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಓಪನ್ ಡ್ರಗ್ಸ್ ಸೇಲ್ ಮಾಡುತ್ತಿದ್ದಾರೆ. ಇನ್ಸ್ ಟ್ರಾಗ್ರಾಮ್ ನಲ್ಲಿ ಡ್ರಗ್ಸ್ ಫೋಟೋ ಹಾಕಿ ಬೆಂಗಳೂರು ಹಾಗು ಗೋವಾದಲ್ಲಿ ಡ್ರಗ್ ಮಾರಾಟ ಮಾಡುವುದಾಗಿ ಪೋಸ್ಟ್ ಹಾಕಿದ್ದಾರೆ. ಇದರ ಜೊತೆಗೆ U get whatever u want ಎಂದು ಪೋಸ್ಟ್ ಸಹ ಹಾಕಿದ್ದು ಕಂಡು ಬಂದಿದೆ. ಸದ್ಯ ಈ ಸಂಬಂಧ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ.
ಬೆಂಗಳೂರು ಮತ್ತು ಗೋವಾದಲ್ಲಿ ನೀವು ಕೇಳಿದಲ್ಲಿ ಡ್ರಗ್ಸ್ ಸಪ್ಪೆ ಮಾಡ್ತೀವಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ದಂಧೆಕೋರರು ಪೋಸ್ಟ್ ಹಾಕುತ್ತಿದ್ದಾರೆ.
ಅಷ್ಟೆ ಅಲ್ಲದೆ ಪರ್ಸನಲ್ ಆಗಿ ಪೋಸ್ಟ್ ಮೆಸೇಜ್ ಮಾಡಿ ರೇಟ್ ಹೇಳುವ ಡ್ರಗ್ಸ್ ದಂಧೆಕೋರರು, 1 ಗ್ರಾಂಗೆ 1 ಸಾವಿರಕ್ಕೂ ಹೆಚ್ಚು ದರ ನಿಗದಿ ಮಾಡಿದ್ದಾರೆ.
ಡ್ರಗ್ಸ್ ಖರೀದಿಗೂ ಕಂಡೀಷನ್ ಹಾಕಿರುವ ದಂಧೆಕೋರರು ಮಿನಿಮಮ್ 10 ಗ್ರಾಂ ಖರೀದಿ ಮಾಡಬೇಕೆಂದು ಮೆಸೇಜ್ ಮಾಡಿರುವುದು ಕಂಡು ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


