ಬೀದರ್: ಕಳೆದ ಒಂದು ವಾರಗಳಲ್ಲಿ ಬೀದರ್ ಪೊಲೀಸರು ನಡೆಸಿದ ಇಸ್ಟಿಟ್, ಮಟ್ಕಾ, ಜೂಜಾಟ ವಿರುದ್ಧದ ಕಾರ್ಯಾಚರಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ.
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲೆಯ ಚಿಟಗುಪ್ಪಾ, ಬ.ಕಲ್ಯಾಣ ಗ್ರಾಮೀಣ, ಹುಮನಾಬಾದ, ಮನ್ನಾಏಖೇಳಿ, ಸಂತಪೂರ, ಭಾಲ್ಕಿ ಗ್ರಾಮೀಣ, ಭಾಲ್ಕಿ ನಗರ ಪೊಲೀಸ್ ಠಾಣೆಗಳ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ನಗದು, ಮೊಬೈಲ್ ಸೇರಿ ಒಟ್ಟು 1,74,475 ರೂ. ಜಪ್ತಿ ಮಾಡಿಕೊಂಡಿದ್ದು, ಸಂಬಂಧಪಟ್ಟ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್


