ಒಟ್ಟು 471 ಭಾರತೀಯರನ್ನು ಹೊತ್ತ ಎರಡು ವಿಮಾನಗಳು ಟೆಲ್ ಅವೀವ್ ನಿಂದ ಭಾನುವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಗೆ ಬಂದಿಳಿದಿವೆ. ಒಂದು ವಿಮಾನವನ್ನು ಏರ್ ಇಂಡಿಯಾ ಮತ್ತು ಇನ್ನೊಂದು ವಿಮಾನವನ್ನು ಸ್ಪೈಸ್ ಜೆಟ್ ನಿರ್ವಹಿಸುತ್ತಿತ್ತು.
ಉಗ್ರಗಾಮಿ ಗುಂಪು ಹಮಾಸ್ ನೊಂದಿಗೆ ತೀವ್ರ ಸಂಘರ್ಷ ನಡೆಯುತ್ತಿರುವ ಇಸ್ರೇಲ್ ನಿಂದ ಹಿಂತಿರುಗಲು ಬಯಸುವ ಭಾರತೀಯರಿಗೆ ಮರಳಲು ಅನುಕೂಲವಾಗುವಂತೆ ಸರ್ಕಾರವು ಪ್ರಾರಂಭಿಸಿದ ಆಪರೇಷನ್ ಅಜಯ್ ಅಡಿಯಲ್ಲಿ ಒಟ್ಟು ನಾಲ್ಕು ವಿಮಾನಗಳನ್ನು ನಿರ್ವಹಿಸಲಾಗಿದೆ.
197 ಪ್ರಯಾಣಿಕರೊಂದಿಗೆ ಮೂರನೇ ವಿಮಾನವು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಭಾನುವಾರ ಹೇಳಿದ್ದಾರೆ.


