ವೋಟರ್ ಐಡಿ ಮತ್ತು ಆಧಾರ್ ಜೋಡಿಸುವುದಕ್ಕೆ ಇದ್ದ ಅಂತಿಮ ಗಡುವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದರಂತೆ, ಈ ವರ್ಷ ಏಪ್ರಿಲ್ 1ಕ್ಕೆ ಇದ್ದ ಕೊನೇ ದಿನ 2024ರ ಮಾರ್ಚ್ 31ರ ತನಕ ವಿಸ್ತರಣೆ ಆಗಿದೆ. ಮತದಾರರು ಈ ಅವಧಿಯನ್ನು ಸದುಪಯೋಗ ಮಾಡಿಕೊಂಡು ತಮ್ಮ ಮತದಾರರ ಚೀಟಿ ಮತ್ತು ಆಧಾರ್ ಜೋಡಿಸುವ ಕೆಲಸವನ್ನು ಮಾಡಬೇಕು ಎಂದು ಸರ್ಕಾರ ಕೇಳಿಕೊಂಡಿದೆ.
ಬಳಕೆದಾರರು ತಮ್ಮ ಆಧಾರ್ ಜತೆಗೆ ವೋಟರ್ ಐಡಿ ಜೋಡಿಸುವ ಕೆಲಸವನ್ನು ಆನ್‌ಲೈನ್ ಮೂಲಕ ಅಥವಾ ಎಸ್‌ಎಂಎಸ್ ಮೂಲಕ 2024ರ ಮಾರ್ಚ್ 31ರ ಒಳಗೆ ಪೂರ್ಣಗೊಳಿಸಬೇಕು. ಆಧಾರ್ ಜತೆಗೆ ವೋಟರ್ ಐಡಿ ಜೋಡಿಸುವ ಕೆಲಸ ಕಡ್ಡಾಯ ಅಲ್ಲದೇ ಹೋದರೂ, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಅದನ್ನು ರದ್ದುಗೊಳಿಸುವುದಕ್ಕೆ ಇದು ನೆರವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


