ಹಾಸನ: ಅಮೆರಿಕದಿಂದ ಕಾಲಿಗೆ ಚೈನ್ ಹಾಕಿಕೊಂಡು ದೇಶದ ಜನರನ್ನು ತಂದು ಬಿಸಾಕಿದ್ದು ಇಡೀ ದೇಶಕ್ಕೆ ಅವಮಾನ. ಆದರೆ, ಇದರ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಎಲ್ಲಾ ರಾಜ್ಯಗಳಿಗೆ ಹೋಗಿ ಮೋದಿ ಸಾಹೇಬ್ರು ಪ್ರೆಸ್ ಮೀಟ್ ಮಾಡಲಿ. ಎಂದಾದರೂ ಓಪನ್ ಡಿಸ್ಕಷನ್ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ಕೇವಲ ಮನ್ ಕೀ ಬಾತ್ ಎನ್ನುತ್ತಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ಮೋದಿಯವರು ಮಂಗಳಸೂತ್ರ, ಪಾಕಿಸ್ತಾನ ಎರಡೇ ಮಾತನಾಡಿದ್ದು. 10 ವರ್ಷದಿಂದ ಬಿಜೆಪಿಯವರಿಗೆ ಮೋದಿ ಬಿಟ್ಟರೆ ಯಾವ ನಾಯಕರು ಕಾಣಲಿಲ್ಲವೇ? ಮಹಾರಾಜ ಅಲ್ಲಿಂದ ಇಳಿಯುವುದೇ ಪರಿಹಾರ ಎಂದರು.
ರಾಹುಲ್ ಗಾಂಧಿ ಜೊತೆ ಮೋದಿಯವರು 5 ಗಂಟೆ ಚರ್ಚೆ ಮಾಡುತ್ತಾರಾ ಎಂದು ಸವಾಲು ಹಾಕಿದ ಸಂತೋಷ್ ಲಾಡ್, ಬಿಜೆಪಿಯಲ್ಲಿ ಕೆಲಸ ಮಾಡುವವರಿಗೆ ಪ್ರಧಾನ ಮಂತ್ರಿ ಹುದ್ದೆ ಕೊಟ್ಟರೆ ದೇಶ ಉಳಿಯುತ್ತದೆ. ಈಗಾಗಲೇ ದೇಶ ನೂರಾರು ವರ್ಷ ಹಿಂದೆ ಸಾಗಿದೆ. ಪ್ರಧಾನಿ ಬದಲಾದರೆ ದೇಶದ ಆರ್ಥಿಕ ಪರಿಸ್ಥಿತಿ ಉಳಿಯುತ್ತದೆ. ಯುವಕರೂ ಉಳಿಯುತ್ತಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4


