ಸರಗೂರು.: ನಮ್ಮ ಸಂವಿಧಾನದ ಬಗ್ಗೆ ನಮಗೆ ಎಷ್ಟು ಅರಿವು ಇದೆ ಎಂಬುದರ ಮೌಲ್ಯ ಮಾಪನವಾಗಿತ್ತು. ಆದರೆ ಪ್ರಶ್ನೆಗಳಿಗೆ ಉತ್ತರಿಸುವಾಗ ವ್ಯಕ್ತವಾದ ಅವರ ಅಜ್ಞಾನ ಮಾತ್ರ ಬೆಚ್ಚಿ ಬೀಳಿಸುವಂತಿತ್ತು. ಈ ಹಿನ್ನೆಲೆಯಲ್ಲಿ ಇಂಥದೊಂದು ದಿನದ ಆಚರಣೆಯ ಮಹತ್ವ ನಮಗೆ ಮನವರಿಕೆಯಾಗಬೇಕು. ನಮ್ಮ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಆಡಳಿತ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಮತ್ತು ಎಲ್ಲ ಕಾನೂನುಗಳ ಮೂಲ ಸ್ತ್ರೋತ್ರ ನಮ್ಮ ಸಂವಿಧಾನ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಗೂ ಬೆಟ್ಟಯ್ಯ ಕೋಟೆ ತಿಳಿಸಿದರು.
ತಾಲೂಕಿನ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರದಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮದಿನದ ಅಂಗವಾಗಿ ಸ್ವಾತಂತ್ರ್ಯ ನಂತರ ಭಾರತದ 77 ನಡೆಯಲ್ಲಿ ಸಂಕಿರಣಗೊಂಡ ಸಂವಿಧಾನ ಆಶಯಗಳು ಕುರಿತು ಜನಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿ ಸರಗೂರು ತಾಲೂಕು ವತಿಯಿಂದ ಹಮ್ಮಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ಪೋಟೋ ದೀಪ ಬೆಳಗಿಸುವ ಮೂಲಕ ಪೋಟೋ ಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು.
ಸಂವಿಧಾನದಲ್ಲಿ ಇರುವ ಅನೇಕ ಅಂಶಗಳನ್ನು ಮತ್ತು ಸಿದ್ಧಾಂತಗಳನ್ನು ಎರವಲು ಪಡೆದು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಜನತೆ ಸಮಾನತೆಯ ಹಕ್ಕುಗಳಿಂದ, ಸ್ವಾತಂತ್ರ್ಯದ ಹಕ್ಕುಗಳಿಂದ ವಂಚಿತರಾಗಿದ್ದರು. ಆದರೆ, ಸ್ವಾತಂತ್ರ್ಯದ ಹೋರಾಟ ಹಾಗೂ ಸಾಮಾಜಿಕ ಹಾಗೂ ಸಿವಿಲ್ ಹಕ್ಕುಗಳಿಗಾಗಿ ನಡೆದ ಹೋರಾಟಗಳಿಂದಾಗಿ ಭಾರತದ ಜನತೆಗೆ ಈ ಹಕ್ಕುಗಳನ್ನು ಪಡೆಯುವುದು ಸಾಧ್ಯವಾಯಿತು ಈ ಹೋರಾಟಗಳೇ ಮುಂದೆ ಸಂವಿಧಾನ ಸಭೆಯ ರಚನೆಗೂ ಕಾರಣವಾಯಿತು ಎಂದರು.
ಮುಖ್ಯ ಭಾಷಣಕಾರರಾಗಿ ಬಾರ್ ಕೋಲ್ ಪತ್ರಿಕೆ ಸಂಪಾದಕ ಬಾರ್ ಕೋಲ್ ರಂಗಸ್ವಾಮಿ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಂವಿಧಾನ ಪ್ರಾರೂಪಣಾ ಸಮಿತಿಯ ಅಧ್ಯಕ್ಷರಾಗಿದ್ದರು. ಸಂವಿಧಾನ ಸಭೆ ಎರಡು ವರ್ಷ, ಹನ್ನೊಂದು ತಿಂಗಳು, ಹದಿನೆಂಟು ದಿನಗಳು ನಡೆಯಿತು. ಈ ಅವಧಿಯಲ್ಲಿ 166 ದಿನಗಳ ಕಾಲ ಸಭೆ ಸೇರಿತ್ತು. ಅಲ್ಲಿಯ ಚರ್ಚೆಗಳಲ್ಲಿ ಪತ್ರಕರ್ತರಿಗೆ ಹಾಗೂ ಜನತೆಗೆ ಮುಕ್ತ ಪ್ರವೇಶಾವಕಾಶವಿತ್ತು ಎಂದು ತಿಳಿಸಿದರು.
ಸಂವಿಧಾನ ಸಭೆ ಸಂವಿಧಾನ ರಚನೆಯನ್ನು ಪೂರ್ಣಗೊಳಿಸಿ 1949ರ ನವೆಂಬರ್ ನಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿಕೊಂಡಿತು, 1950ರ ಜನವರಿ 26 ರಂದು ಭಾರತದ ಸಂವಿಧಾನ ಜಾರಿಗೆ ಬಂತು. ಸಂವಿಧಾನ ಜನತೆಯ ಹಕ್ಕುಗಳ ಮೂಲವಾಯಿತು. ವಿಶ್ವದಲ್ಲೆ ಅತ್ಯಧಿಕ ಹಕ್ಕುಗಳನ್ನು ಆಧರಿಸಿ ರಚನೆಯಾದಂಥ ಅತಿ ದೀರ್ಘವಾದ ಲಿಖಿತ ಸಂವಿಧಾನ ಎಂಬ ಗರಿಮೆಗೆ ಪಾತ್ರವಾಗಿದೆ ನಮ್ಮ ಸಂವಿಧಾನ ಎಂದರು.
ವ್ಯವಸ್ಥೆ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಸಂಸದೀಯ ವ್ಯವಸ್ಥೆ, ಜಾತ್ಯತೀತ ನಿಲುವು, ಏಕ ನಾಗರಿಕತ್ವ ವ್ಯವಸ್ಥೆ, ಪ್ರಾಪ್ತ ವಯಸ್ಕರ ಮತದಾನದ ಹಕ್ಕು ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡಲು ಇರುವ ಅವಕಾಶ-ಈ ಎಲ್ಲ ಅಂಶಗಳು ನಮ್ಮ ಸಂವಿಧಾನ.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಅಲಗೂಡು ಶಿವಕುಮಾರ್, ದಸಂಸ ಜಿಲ್ಲಾ ಸಮಿತಿ ಸಂಚಾಲಕರು ಶುಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು,ಬಿ ಡಿ. ಶಿವಬುದ್ದಿ, ಅದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಟೌನ್ ಗಡಿಯಜಮಾನ ರಂಗಯ್ಯ,ಯಜಮಾನ ಬೋಗಯ್ಯ, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಸಣ್ಣಸ್ವಾಮಿ, ಸರಗೂರು ತಾಲೂಕು ಸಮಿತಿ ಸಂಚಾಲಕರು ಡಿ.ಎಂ. ಶಿವಶಂಕರ್, ಕಾಳಸ್ವಾಮಿ, ಶಿವಚನ್ನ, ಕಾಳಸ್ವಾಮಿ, ರಾಮಲಿಂಗಪ್ಪ, ಕಲ್ಲೇಶ್, ಪುಟ್ಟರಾಜು, ಶಾಂತರಾಜು, ಪುಟ್ಟಯ್ಯ, ಪ್ರಕಾಶ್, ಮುತ್ತು, ಸರಗೂರು ಹೋಬಳಿ ಪದಾಧಿಕಾರಿಗಳು ಕಾಂತಯ್ಯ, ರಂಗಸ್ವಾಮಿ, ಹುಚ್ಚಯ್ಯ, ರಂಗಯ್ಯ, ಕಂದಲಿಕೆ ಹೋಬಳಿ ಪದಾಧಿಕಾರಿಗಳು ನಾಗಣ್ಣ, ಲೋಕೇಶ್, ನಾಗರಾಜು,ಕಾಳಸ್ವಾಮಿ, ದೇವಣ್ಣ, ಲೋಕೇಶ್, ಎಚ್.ಡಿ.ಕೋಟೆ ಪದಾಧಿಕಾರಿಗಳು ಮಹೇಶ್, ರಾಜಶೇಖರ್, ಕೃಷ್ಣ, ಮಹೇಶ್, ಗೋಪಾಲ್, ಸುರೇಶ್, ಸಿದ್ದರಾಜು, ದಾಸಯ್ಯ, ಅಂಕಯ್ಯ, ಪುಟ್ಟಸ್ವಾಮಿ, ಕೃಷ್ಣ, ಮಲ್ಲಿಕ, ಸಿದ್ದರಾಜು, ನಾಗರಾಜು, ಸೋಮೇಶ್, ಗಣೇಶ, ಪರಮೇಶ್, ಕರಿಯಪ್ಪ, ರವಿಕುಮಾರ್, ಪುಟ್ಟಯ್ಯ,ಮಹದೇವ, ದೊರೆಸ್ವಾಮಿ, ರಾಮಯ್ಯ ಅಮವಾಸೆ, ನಂಜುಂಡಸ್ವಾಮಿ, ಹಾಲಪ್ಪ, ನಾರಾಯಣ, ಮಂಜು ಜಯಣ್ಣ, ಮುಖಂಡರು ಬೋಗಯ್ಯ, ಚಿನ್ನಣ್ಣ, ಮಲ್ಲೇಶ್, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW