ನಮ್ಮ ಸರ್ಕಾರ ರಚನೆಯಾದ ತಕ್ಷಣ ನಾವು 4% ಮುಸ್ಲಿಂ ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಮತ್ತು ಅದನ್ನು ಎಸ್ ಸಿ, ಎಸ್ ಟಿ ಮತ್ತು ಒಬಿಸಿಗೆ ಹಂಚುತ್ತೇವೆ ಎಂದು ನಾವು ನಿರ್ಧರಿಸಿದ್ದೇವೆ. ಎಂದು ತೆಲಂಗಾಣ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಗ್ತಿಯಾಲ್ ನಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಸಿಆರ್ ಓವೈಸಿಗೆ ಹೆದರಿ ಹೈದರಾಬಾದ್ ವಿಮೋಚನಾ ದಿನ ಆಚರಿಸುವುದಿಲ್ಲ. ಆದರೆ ಹೈದರಾಬಾದ್ ವಿಮೋಚನಾ ದಿನವನ್ನು ರಾಜ್ಯ ದಿನವನ್ನಾಗಿ ಆಚರಿಸುತ್ತೇವೆ ಎಂದರು.
ಬಿಆರ್ ಎಸ್, ಮಜ್ಲಿಸ್ ಮತ್ತು ಕಾಂಗ್ರೆಸ್ 2G, 3G ಮತ್ತು 4G ಪಕ್ಷಗಳು. 2ಜಿ ಎಂದರೆ ಕೆಸಿಆರ್ ಮತ್ತು ಕೆಟಿಆರ್. 3ಜಿ ಎಂದರೆ ಓವೈಸಿಯ ಅಜ್ಜ, ತಂದೆ ಮತ್ತು ಓವೈಸಿ. 4ಜಿ ಎಂದರೆ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ರಾಹುಲ್. ಅದರಲ್ಲಿ ನಿಮ್ಮ ಸ್ಥಾನ ಎಲ್ಲಿದೆ?’’ ಎಂದು ಅಮಿತ್ ಶಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.


