ಸರಗೂರು: ಕನ್ನಡ ನಮ್ಮ ನಾಡಿನ ಹೆಮ್ಮೆಯ ಭಾಷೆ ಈ ಭಾಷೆ ಹಲವಾರು ಭಾಷೆಗಳಿಗೆ ತಾಯಿಯಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಕಸಾಪ ನಿಕಟಪೂರ್ವ ಅಧ್ಯಕ್ಷ ವೈ.ಡಿ.ರಾಜಣ್ಣ ಹೇಳಿದರು.
ಪಟ್ಟಣದ ಸಮೀಪದ ತುಂಬಸೋಗೆ ಗ್ರಾಮದಲ್ಲಿರುವ ಎಂ.ಎಂ.ಕೆ. ಸ್ವತಂತ್ರ ಪದವಿ ಪೂರ್ವ ಕಾಲೇಜು ಹಾಗೂ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ 70 ನೇ ಕನ್ನಡ ರಾಜ್ಯೋತ್ಸವವನ್ನು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿ ಮಾತನಾಡಿದರು.
ತನು ಕನ್ನಡ, ನುಡಿ ಕನ್ನಡ, ಮನ ಕನ್ನಡ ಕನ್ನಡ ನಮ್ಮ ಉಸಿರಾಗಿರಲಿ ಅದನ್ನು ಎಲ್ಲರೂ ಉಳಿಸಿ ಬೆಳೆಸೋಣವೆಂದು ಹೇಳಿದರು.
ಸಮಾಜ ಸೇವಕಿ ಸುಧಾ ಮೃತ್ಯುಂಜಯಪ್ಪ ಮಾತನಾಡಿ, ‘ನಮ್ಮ ಜೀವನದಲ್ಲಿ ನಮ್ಮ ಆಚಾರ ವಿಚಾರಗಳು, ನಾವು ನಡೆದುಕೊಳ್ಳುವ ರೀತಿ ಮುಖ್ಯವಾಗುತ್ತದೆ. ಏನಾದರೂ ಆಗು ಆದರೆ ಅದಕ್ಕೆ ಮೊದಲು ನೀ ಮಾನವನಾಗು ಎಂಬಂತೆ ಮೊದಲು ನಾವು ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.

ಕೆ.ಎಚ್.ರಾಮಯ್ಯ ವಿದ್ಯಾರ್ಥಿನಿಲಯ ಧರ್ಮದರ್ಶಿ ಕೆ.ಟಿ.ಕೃಷ್ಣಪ್ಪ, ಮಾತನಾಡಿ ಇಂದು ನಾವು ನಮ್ಮ ‘ಕರುನಾಡು’, ‘ಕನ್ನಡಾಂಭೆಯ ನಾಡು’ ಆದ ಕರ್ನಾಟಕದ ಉದಯದ ದಿನವನ್ನು ಆಚರಿಸುತ್ತಿದ್ದೇವೆ. ನವೆಂಬರ್ 1, 1956 ರಂದು, ನೆರೆರಾಜ್ಯಗಳ ಕನ್ನಡಿಗರನ್ನು ಒಗ್ಗೂಡಿಸಿ ‘ಕರುನಾಡು’ ಅಸ್ತಿತ್ವಕ್ಕೆ ಬಂದ ದಿನವನ್ನು ನಾವು ಪ್ರತಿ ವರ್ಷ ರಾಜ್ಯೋತ್ಸವವಾಗಿ ಆಚರಿಸುತ್ತೇವೆ.
ಕನ್ನಡ ರಾಜ್ಯೋತ್ಸವ ಕೇವಲ ಒಂದು ಹಬ್ಬವಲ್ಲ. ಇದು ನಮ್ಮ ಭಾಷೆ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ ಎಂದು ನುಡಿದರು.
ಮೈವಿವಿ ನಿವೃತ್ತ ಪ್ರಾಧ್ಯಾಪಕ ಜಾನಪದ ಸಾಹಿತಿಗಳು ಡಾ.ಪಿ.ಕೆ.ರಾಜಶೇಖರ್, ಡಾ.ಸುಷ್ಮಾ ವೈದ್ಯನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಎಂ.ಎಂ.ಕೆ.ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಸತೀಶ್ ಕುಮಾರ್, ಕಾರ್ಮಿಕ ಕಲ್ಯಾಣ ಕೆಎಸ್ಸಾರ್ಟಿಸಿ ಇಲಾಖೆ ಪುಟ್ಟೇಗೌಡ, ಎಂ.ಎಂ.ಕೆ. ಕಾಲೇಜಿನ ಪ್ರಾಂಶುಪಾಲ ಎಸ್.ಪಿ.ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಕನ್ನಡ ಪ್ರಮೋದ್, ಮುಖ್ಯೋಪಾಧ್ಯಾರು ಜಾನ್ ಬಾಸ್ಕೋ, ಉಪನ್ಯಾಸಕರಾದ ವಿರುಪಾಕ್ಷ, ಮೋಹನ, ಮಹಾದೇವಿ, ಮುಸ್ಕಾನ್,ತನುಜಾ, ಸಿಂಧು, ಪ್ರಸನ್ನ, ಮನೋಜ್, ಸಿದ್ದಾರ್ಥ್, ವೈಧ್ಯನಾಥ್,ಮಂಗಳಮ್ಮ, ಅಶೋಕ್, ಇನ್ನೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


