ಬೀದರ್: ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ವೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಘೋಷವಾಕ್ಯದೊಂದಿಗೆ ಬೀದರ್ ನಗರದಲ್ಲಿ ಭಾನುವಾರ ಮ್ಯಾರಥಾನ್ ನಡೆಯಿತು.
ಫಿಟ್ನೆಸ್ ಫಾರ್ ಆಲ್, ಡ್ರಗ್ಸ್ ಮುಕ್ತ ಕರ್ನಾಟಕ ಕಡ್ಡಾಯ ತಲೆಕಾಪು ಧರಿಸಿ ಮತ್ತು ಸೈಬರ್ ಅಪರಾಧ ಮುಕ್ತ ಬೀದರ್ ಧ್ಯೇಯವಾಕ್ಯದೊಂದಿಗೆ ನಡೆದ ಪೊಲೀಸ್ ರನ್ ಗೆ ಭರ್ಜರಿ ಸ್ಪಂದನೆ ದೊರೆಯಿತು.
ನಗರದ ಸಿದ್ದಾರೂಢ ಮಠದ ಆವರಣದಿಂದ ಬೆಳಿಗ್ಗೆ ಆರಂಭಗೊಂಡ ಓಟ ಬಿವಿಬಿ ಕಾಲೇಜು, ಮೈಲೂರ್ ಕ್ರಾಸ್, ಹಾರೂರಗೇರಿ ಕಮಾನ್, ಬೋಮಗೊಂಡೇಶ್ವರ, ಮೃತ್ತ ಭಗತ್ ಸಿಂಗ್ ವೃತ್ತ ಶಿವಾಜಿ ವೃತ್ತ ಮಡಿವಾಳ ವೃತ್ತದ ಮಾರ್ಗವಾಗಿ ಶಿವನಗರ ವಾಕಿಂಗ್ ಪಾಥ್ ಬಳಿ ಮುಕ್ತಾಯಗೊಂಡಿತು.
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಎಸ್ ಬಿಐ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಎಸ್ ಬಿಐ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರು, ವಿದ್ಯಾರ್ಥಿಗಳು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4