ಕೊರಟಗೆರೆ : ಕೊರಟಗೆರೆ ತಾಲ್ಲೂಕಿನ ಜನರೊಂದಿಗೆ ನನ್ನ 30 ವರ್ಷದ ಅವಿನಾಭಾವ ಸಂಬಂಧವಿದ್ದು, ನನ್ನ ಹುಟ್ಟು ಹಬ್ಬವನ್ನು ನನ್ನ ಅಭಿಮಾನಿಗಳು ಸಾರ್ವಜನಿಕ ಸೇವೆಯನ್ನಾಗಿ ಆಚರಿಸುತ್ತಿದ್ದಾರೆ ಎಂದು ಮಾಜಿ ಜಿಲ್ಲಾಪಂಚಾಯತ್ ಸದಸ್ಯರಾದ ಪಿ.ಎನ್. ಕೃಷ್ಣಮೂರ್ತಿ ತಿಳಿಸಿದರು.
ಅವರು ಕೊರಟಗೆರೆ ಪ್ರವಾಸಿ ಮಂದಿರದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಾನು ಸುಮಾರು 30 ವರ್ಷಗಳಿಂದ ಕೊರಟಗೆರೆ ತಾಲ್ಲೂಕಿನಲ್ಲಿ ಸಾರ್ವಜನಿಕ ಸೇವಾ ಬದುಕಿನಲ್ಲಿ ಇದ್ದೇನೆ, ಡಿಸೆಂಬರ್ 27 ಶನಿವಾರದಂದು ನನ್ನ ಅಭಿಮಾನಿಗಳು ಹಿತೈಷಿಗಳು ನನ್ನ 59 ವರ್ಷದ ಹುಟ್ಟು ಹಬ್ಬವನ್ನು ಸಾರ್ವಜನಿಕ ಸೇವಾ ಕಾರ್ಯಕ್ರಮವನ್ನಾಗಿ ಅಚರಿಸುತ್ತಿದ್ದು, ಬೆಳಿಗ್ಗೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಬ್ರೆಡ್ ಹಾಗೂ ಬೆಚ್ಚನೆಯ ಹೊದಿಕೆಗಳನ್ನು ವಿತರಿಸಲಾಗುವುದು ಹಾಗೂ ಮದ್ಯಾಹ್ನ 1 ಗಂಟೆಗೆ ಕೊರಟಗೆರೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಬೆಚ್ಚನೆ ಉಡುಪುಗಳನ್ನು ನೀಡಲಾಗುವುದು.
ನಂತರ ತುಮಕೂರು ನಗರದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು ಅಲ್ಲಿಯೂ ಆಚರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಪ.ಪಂ ಸದಸ್ಯ ಅಶ್ವಥನಾರಾಯಣರಾಜು, ಮುಖಂಡರುಗಳಾದ ವಿಜಯ್‌ಕುಮಾರ್, ರಮೇಶ್, ಉಮೇಶ್, ಲಕ್ಷ್ಮಿಕಾಂತ, ಶಶಿಕುಮಾರ್, ಪ್ರತಾಪರುದ್ರ, ಫಾರೂಕ್, ಅಜ್ಗರ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


