ತುಮಕೂರು: ಪದವಿ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ವಿಳಂಬ ನಡೆಸಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಅತಂತ್ರವಾಗಿದೆ ಎಂದು ಎಐಡಿಎಸ್ ಒ ನ ಅಧ್ಯಕ್ಷರಾದ ಅಶ್ವಿನಿ ಟಿ ಹೇಳಿದರು.
ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಪದವಿ ಪಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇದುವರೆಗೂ ಪರೀಕ್ಷಾ ಶುಲ್ಕ ಕೂಡ ಪಾವತಿಸಲು ಯಾವುದೇ ಸೂಚನೆ ಹೊರಡಿಸಿಲ್ಲ. ಆದರೆ ತರಗತಿಗಳು ಮುಗಿದು ಪರೀಕ್ಷಾ ಸಿದ್ಧತೆಗೆಂದು ಕಳೆದ ಒಂದು ತಿಂಗಳಿಂದ ರಜಾ ನೀಡಲಾಗಿದೆ. ಇನ್ನೊಂದು ಕಡೆ ದ್ವಿತೀಯ ಮತ್ತು ತೃತಿಯ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇದೇ ತಿಂಗಳ 23 ರಂದು ಮುಗಿಯುತ್ತದೆ. ಕೊರೋನಾ ಸಾಂಕಾಮಿಕದ ಮೊದಲನೇಯ ಮತ್ತು ಎರಡನೇಯ ಅಲೆಯಿಂದಾಗಿ ಕಳೆದ ಶೈಕ್ಷಣಿಕ ವರ್ಷವು ಗೊಂದಲದಲ್ಲೇ ಕಳೆದು ಹೋಗಿದೆ. ವರ್ಷವು ಕೂಡ ಶೈಕ್ಷಣಿಕ ಚಟುವಟಿಕೆಗಳು ಸಮರ್ಪಕವಾಗಿ ನಡೆಯದಿರುವುದರಿಂದ ವಿದ್ಯಾರ್ಥಿಗಳು ಆತಂತ್ರ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಒಂದು ಕಡೆ ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಯಾವುದೇ ಪೂರ್ವಭಾವಿ ಸಿದ್ಧತೆಯಿಲ್ಲದೆ ಹಠಾತ್ತನೆ 4 ವರ್ಷದ ಪದವಿ ಜಾರಿಗೊಳಿಸಿರುವುದು ಹಾಗೂ ವಿಷಯ ಹಂಚಿಕೆಯ ಗೊಂದಲದಲ್ಲೇ ವಿದ್ಯಾರ್ಥಿಗಳ ಸುಮಾರು ತಿಂಗಳ ಸಮಯ ಕಳೆದುಹೋಗಿವೆ. ವಿದ್ಯಾರ್ಥಿಗಳಿಗೆ ಈ ವರ್ಷದ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳು ಬಂದಿರುವುದು ಬಹಳ ತಡವಾಗಿದೆ. ಏಪ್ರಿಲ್ ಎರಡನೇ ವಾರ ಮುಗಿಯುತ್ತಾ ಬಂದಿದ್ದರು ಸಹ ತುಮಕೂರು ವಿಶ್ವವಿದ್ಯಾನಿಲಯದ ಪದವಿ ಪ್ರಥಮ ಸೆಮಿಸ್ಟರ್ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈಗಾಗಲೇ ವಿ.ವಿಯು ಈ ಶೈಕ್ಷಣಿಕ ವರ್ಷದಿಂದ ಎನ್‌ಪಿ-202) ಜಾರಿ ಮಾಡಿದ್ದು, ಈ ನೂತನ ನೀತಿಗೆ ತಕ್ಕಂತೆ ಪರೀಕ್ಷಾ ಸಿದ್ಧತೆಗಳು-ಅಂದರೆ, ಪ್ರಶ್ನೆಪತ್ರಿಕೆ, ಪರೀಕ್ಷಾ ವೇಳಾಪಟ್ಟಿ, ಪಠ್ಯಕ್ರಮ ಪೂರ್ಣಗೊಳ್ಳುವುದು ಎಲ್ಲವೂ ಈಗಾಗಲೇ ಮುಗಿದಿರಬೇಕಿತ್ತು. ಆದರೆ ಈ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ರಾಜ್ಯ ಸರ್ಕಾರ ಮತ್ತು ವಿ.ವಿ.ಗಳು ಸಂಪೂರ್ಣ ವಿಫಲವಾಗಿವೆ ಎಂದರು.
ಕೆಲವು ವಿ.ವಿ.ಗಳು ನಿಗದಿಪಡಿಸಿದ್ದ ವೇಳಾಪಟ್ಟಿಯನ್ನು ಎರಡು ಮೂರು ಬಾರಿ ಮುಂದೂಡಿವೆಯಲ್ಲದೆ, ಪರೀಕ್ಷೆಯ ವೇಳಾಪಟ್ಟಿ, ಪರೀಕ್ಷಾ ಪ್ರಕ್ರಿಯೆಯ ಕುರಿತು ಸನೆ ಸಹ ನೀಡುತ್ತಿಲ್ಲ. ಹೆಚ್ಚು ಕಡಿಮೆ ಪ್ರಥಮ ವರ್ಷದ ಪದವಿ ಕೋರ್ಸ್ ಮುಗಿಯಬೇಕಿದ್ದ ಸಮಯದಲ್ಲಿ ವಿ.ವಿ.ಗಳು ಪಥಮ ಸೆಮಿಸ್ಟರ್ ಪರೀಕ್ಷೆಯ ಕುರಿತು ವೇಳಾಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗದೆ, ಅತಂತ್ರ ಸ್ಥಿತಿಯಲ್ಲಿರುವುದು, ಎನ್‌ಇಪಿ- 2020ರ ಹಠಾತ್ ಹೇಲಕೆಯು ಸೃಷ್ಟಿಸಿರುವ ಬಿಕ್ಕಟ್ಟುಗಳಿಗೆ, ಸಮಸ್ಯೆಗಳಿಗೆ ಹಿಡಿದ ಕನ್ನಡಿಯಾಗಿದೆ ಎಂಬುದನ್ನು ನಾವು ಮರೆಯಬಾರದು ಎಂದರು.
ಜೂನ್-ಜುಲೈ ತಿಂಗಳಿನಿಂದ ಪದವಿ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಹಿಂದಿನ ವರ್ಷ ಪದವಿ ಸೇರಿದ್ದ ವಿದ್ಯಾರ್ಥಿಗಳ ಇನ್ನೂ ತಮ್ಮ ಮೊದಲ ವರ್ಷ ಪೂರೈಸಿಲ್ಲ. ಒಂದೇ ಸಮಯದಲ್ಲಿ, ಪ್ರಥಮ ವರ್ಷದ ಎರಡು ವಿಭಿನ್ನ ಬ್ಯಾಚ್ ಗಳನ್ನು ನಡೆಸಲು ಹೇಗೆ ಸಾಧ್ಯ? ಅದು ವೈಜ್ಞಾನಿಕವು ಅಲ್ಲ, ವಾಸ್ತವವೂ ಅಲ್ಲ. ಈ ಬಿಕ್ಕಟ್ಟನ್ನು ಬಗೆಹರಿಸುವ ಕುಂಬ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಕ್ರಮ ಏನು? ಈಗಿರುವ ಪ್ರಥಮ ಪದವಿ ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್ ವಿವಿಗಳ ಚಿಂತನೆ ಏನು? ಈ ಪರೀಕ್ಷೆ ಮುಗಿಯುವುದು ಯಾವಾಗ? ವಿದ್ಯಾರ್ಥಿಗಳ ಉಗ ಶಿಕ್ಷಣಕ್ಕೆ ಅಂದರೆ ಸ್ನಾತಕೋತ್ತರ ಪದವಿ ಪ್ರದೇಶಕ್ಕೆ ತಡವಾಗುವುದಿಲ್ಲವೇ? ವಿವಿಧ ವಿಶ್ವವಿದ್ಯಾನಿಲಯಗಳ ಸ್ನಾತಕೋತ್ತರ ಪದವಿ ಪ್ರವೇಶ ಬೇರೆ ಬೇರೆ ಸಮಯದಲ್ಲಿರುತ್ತದೆ. ಈ ಕುರಿತು ಸರ್ಕಾರದ ನಿಲುವೇನು ಎನ್‌ಇಪಿ ಹಾತ್ ಹೇರಿಕೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಉದ್ಯೋಗ ಸೃಷ್ಟಿಸುವಲ್ಲಿ ಯಾವ ರೀತಿ ಕಾರ್ಯವೈಕರಿ ನಡೆಸಿದೆ? ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎನ್ ಇಪಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ಸರ್ಕಾರದ ನಿಲುವೇನು? ಎಂದರು
ಈ ಸಂದರ್ಭದಲ್ಲಿ ಎಐಡಿಎಸ್ ಓ ನ ಅಧ್ಯಕ್ಷರು ಅಶ್ವಿನಿ ಟಿ ಈ, ಕಾರ್ಯದರ್ಶಿ ಲಕ್ಕಪ್ಪ, ಹಾಗೂ ಜಂಟಿ ಕಾರ್ಯದರ್ಶಿ ಅಷರ್ ಉಪಸ್ಥಿತರಿದ್ದರು.
ವರದಿ: ಎ.ಎನ್. ಪೀರ್ ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5