ದೆಹಲಿ: 90ರ ಹರೆಯದ ಹಿರಿಯ ಗಾಯಕಿ singer ಸಂಧ್ಯಾ ಮುಖೋಪಾಧ್ಯಾಯ ಎಂದೇ ಚಿರಪರಿಚಿತರಾಗಿರುವ ಸಂಧ್ಯಾ ಮುಖರ್ಜಿ Sandhya Mukherjee ಅವರು ಮಂಗಳವಾರ ಪದ್ಮಶ್ರೀ ಪ್ರಶಸ್ತಿಯ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ.
ಗಣರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯಲ್ಲಿ ಪದ್ಮಶ್ರೀ Padma Shri ಎಂದು ಹೆಸರಿಸಲು ಒಪ್ಪಿಗೆ ಕೋರಿ ಅವರನ್ನು ಸಂಪರ್ಕಿಸಲಾಗಿತ್ತು ಆಗ ಸಂಧ್ಯಾ ಮುಖರ್ಜಿ ಪ್ರಶಸ್ತಿಯನ್ನು ತಿರಸ್ಕರಿಸುವುದನ್ನು ಅವರ ಪುತ್ರಿ ಸೆನ್ಗುಪ್ತಾ ಹೇಳಿದ್ದಾರೆ.
ಸೇನ್ ಗುಪ್ತಾ ಅವರಿಗೆ ಕರೆ ಮಾಡಿದ ಹಿರಿಯ ಅಧಿಕಾರಿಗೆ ತನ್ನ ತಾಯಿ ಪದ್ಮಶ್ರೀ ಪುರಸ್ಕೃತೆ ಎಂದು ಹೆಸರಿಸಲು ಇಚ್ಛಿಸುವುದಿಲ್ಲ ಮತ್ತು ಇಳಿ ವಯಸ್ಸಿನಲ್ಲಿ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ “ಅವಮಾನ” ಅನುಭವಿಸಿದೆ. ಅಲ್ಲದೇ ಇದು ಕಿರಿಯ ಕಲಾವಿದರಿಗೆ ಹೆಚ್ಚು ಅರ್ಹವಾಗಿದೆ ಮತ್ತು ತಮ್ಮಂತವರಿಗೆ ಅಲ್ಲ. ತಮ್ಮ ತಾಯಿಯ ನಿರ್ಧಾರಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸೆನ್ಗುಪ್ತಾ ಎಂದು ಹೇಳಿದ್ದಾರೆ.
ಇವರಿಗಿಂತ ಮೊದಲು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಮಂಗಳವಾರ ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಪದ್ಮಭೂಷಣ ಎಂದು ಹೆಸರಿಸಿದ್ದು ನನಗೆ ತಿಳಿದಿಲ್ಲ, ಹಾಗಾಗಿ ಪ್ರಶಸ್ತಿ ತಿರಸ್ಕರಿಸುವುದಾಗಿ ಭಟ್ಟಾಚಾರ್ಯ ಹೇಳಿದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy