ಇಸ್ಲಾಮಾಬಾದ್: ದಿನದಿಂದ ದಿನಕ್ಕೆ ಆರ್ಥಿಕವಾಗಿ ದಿವಾಳಿಯಾಗುತ್ತಿರುವ ಪಾಕಿಸ್ಥಾನಕ್ಕೆ ಬೆಲೆಯ ಏರಿಕೆ ನೋವಿನ ಮೇಲೆ ಬರೆ ಎಳೆದಂತಾಗುತ್ತದೆ. ಬುಧವಾರ ರಾತ್ರೋ ರಾತ್ರಿ ತೈಲ ಬೆಲೆ ಗಗನಕ್ಕೇರಿದ್ದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಷರತ್ತುಗಳ ಮೇರೆಗೆ ಬೆಲೆ ಹೆಚ್ಚಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅತ್ಯಂತ ಗರಿಷ್ಠ ಮಟ್ಟಕ್ಕೆ ಹೆಚ್ಚಾಗಿದ್ದು ಪೆಟ್ರೋಲ್ ಬೆಲೆ 22.20 ರೂ. ಮತ್ತು ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಠ 272 ರೂ.ಗಳಿಗೆ ತಲುಪಿದೆ. ಹೈಸ್ಪೀಡ್ ಡೀಸೆಲ್ (Diesel) ಬೆಲೆ 17.20 ರೂ. ಹೆಚ್ಚಿಸಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 280 ರೂ.ಗೆ ಹೆಚ್ಚಳವಾಗಿದೆ. ಸೀಮೆ ಎಣ್ಣೆ ಬೆಲೆ 12.90 ರೂ. ಹೆಚ್ಚಿಸಿದ್ದು ಪ್ರತಿ ಲೀಟರ್‌ಗೆ 202.73 ರೂ.ಗಳಿಗೆ ಮಾರಾಟವಾಗುತ್ತಿದೆ. ಜೊತೆಗೆ ಲಘು ಡೀಸೆಲ್ ಬೆಲೆ 9.68 ರೂ. ಹೆಚ್ಚಿಸಿದ್ದು, ಪ್ರತಿ ಲೀಟರ್ 196.68 ರೂ.ಗಳಿಗೆ ಮಾರಾಟವಾಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


