ಪಾಕಿಸ್ತಾನದ ಪೊಲೀಸ್ ಅಧಿಕಾರಿ ಬ್ಯಾಂಕ್ ನಲ್ಲಿ ತನ್ನ ಖಾತೆಯಿಂದ ಸಂಬಳ ಹಣ ಪಡೆಯಲು ಹೋದಾಗ 10 ಕೋಟಿ ರೂ. ಜಮೆ ಆಗಿರುವುದು ನೋಡಿ ಸ್ವತಃ ಬೆಚ್ಚಿಬಿದ್ದಿದ್ದಾರೆ.
ಸಾಮಾನ್ಯವಾಗಿ ಅಕೌಂಟ್ ಗೆ ಹಣ ವರ್ಗಾವಣೆ, ಹಣ ಪಾವತಿ ಮುಂತಾದವುಗಳ ವೇಳೆ ಎಡವಟ್ಟಿನಿಂದ 100-200, 1000, 10,000 ಸಾವಿರ ರೂ. ಬೇರೆಯವರ ಪಾಲಾಗಿರುವುದು ಕೇಳಿದ್ದೀವಿ. ನೋಡಿದ್ದೀವಿ. ಆದರೆ ಪಾಕಿಸ್ತಾನದ ಈ ಪೊಲೀಸ್ ಅಧಿಕಾರಿಗೆ ಕಂಡು ಕೇಳರಿಯದ 10 ಕೋಟಿ ರೂ. ಬಂದು ಬಿದ್ದಿರುವುದು ಈಗ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತಿದೆ.
ಕರಾಚಿ ಪೊಲೀಸ್ ಅಧಿಕಾರಿ ಅಮಿರ್ ಗೊಪಾಂಗ್ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಬಳದ ಜೊತೆ 10 ಕೋಟಿ ರೂ. ಅನಾಮಧೇಯ ಖಾತೆಯಿಂದ ಜಮೆ ಆಗಿದೆ. ಇದರಿಂದ ಆತ ರಾತ್ರೋರಾತ್ರಿ ದಿಢೀರ್ ಕೋಟ್ಯಾಧಿಪತಿ ಆಗಿದ್ದಾರೆ.
ಜೀವಮಾನದಲ್ಲೇ ನಾನು ಇಷ್ಟು ದೊಡ್ಡ ಮೊತ್ತ ನೋಡಿಲ್ಲ. ಸಾವಿರಾರು ರೂಪಾಯಿ ನೋಡಿದ್ದೆ. ಹೊರತು ಲಕ್ಷಗಳನ್ನು ಕೂಡ ಎಣಿಸಿಲ್ಲ. ಬ್ಯಾಂಕ್ ಗೆ ಹೋದಾಗ ಇಷ್ಟು ದೊಡ್ಡ ಮೊತ್ತ ನನ್ನ ಖಾತೆಯಲ್ಲಿ ನೋಡಿ ಬೆಚ್ಚಿಬಿದ್ದೆ ಎಂದು ಪೊಲೀಸ್ ಅಧಿಕಾರಿ ಅಮಿರ್ ಗೊಪಾಂಗ್ ಹೇಳಿದ್ದಾರೆ.
ವಿಶೇಷ ಅಂದರೆ ಅಮಿರ್ ಗೊಪಾಂಗ್ ಮಾತ್ರವಲ್ಲ, ಪಾಕಿಸ್ತಾನದ ಲರ್ಕಾನಾ ಮತ್ತು ಸುಕ್ಕುರ್ ಠಾಣಾ ಪೊಲೀಸರು ಇದೇ ರೀತಿ ದೊಡ್ಡ ಮೊತ್ತ ಬ್ಯಾಂಕ್ ಖಾತೆಗೆ ಜಮೆ ಆಗಿರುವುದು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.
ಲಾರ್ಕಾರ ಪೊಲೀಸ್ ಠಾಣೆಯ ಅಧಿಕಾರಿ ಖಾತೆಗೆ 5 ಕೋಟಿ ಜಮೆ ಆಗಿದ್ದರೆ, ಸುಕ್ಕುರ್ ಠಾಣಾಧಿಕಾರಿ ಖಾತೆಗೆ 5 ಕೋಟಿ ರೂ. ಜಮೆ ಆಗಿದೆ.
ಪೊಲೀಸ್ ಅಧಿಕಾರಿಗಳ ಖಾತೆಗೆ ಈ ರೀತಿ ಹಣ ಹರಿದು ಬರುತ್ತಿರುವ ಬಗ್ಗೆ ತನಿಖೆ ಆರಂಭಗೊಂಡಿದ್ದು, ಬ್ಯಾಂಕ್ ಅಧಿಕಾರಿಗಳು ಇವರ ಎಟಿಎಂ ಡ್ರಾ ನಿರ್ಬಂಧಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy