nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಕಲಚೇತನರ ಹಿತರಕ್ಷಣೆಗಾಗಿ ಕಾನೂನು ಜಾಗೃತಿ ಮೂಡಿಸುವುದು ಅಗತ್ಯ: ವಕೀಲ ಮಣಿರಾಜು

    December 24, 2025

    ಸರಗೂರು | ದೇವಲಾಪುರ ರಸ್ತೆ ಒತ್ತುವರಿ ತೆರವು: ತಹಶೀಲ್ದಾರ್ ನೇತೃತ್ವದಲ್ಲಿ ಕ್ರಮ

    December 24, 2025

    ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ: ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ, ಪರಿಶೀಲನೆ

    December 24, 2025
    Facebook Twitter Instagram
    ಟ್ರೆಂಡಿಂಗ್
    • ವಿಕಲಚೇತನರ ಹಿತರಕ್ಷಣೆಗಾಗಿ ಕಾನೂನು ಜಾಗೃತಿ ಮೂಡಿಸುವುದು ಅಗತ್ಯ: ವಕೀಲ ಮಣಿರಾಜು
    • ಸರಗೂರು | ದೇವಲಾಪುರ ರಸ್ತೆ ಒತ್ತುವರಿ ತೆರವು: ತಹಶೀಲ್ದಾರ್ ನೇತೃತ್ವದಲ್ಲಿ ಕ್ರಮ
    • ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ: ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ, ಪರಿಶೀಲನೆ
    • ನರೇಗಾ ಹೆಸರು ಬದಲಾವಣೆ ಖಂಡನೀಯ: ಶಾಸಕ ಎಸ್.ಆರ್. ಶ್ರೀನಿವಾಸ್ ಆಕ್ರೋಶ
    • ತಿಪಟೂರು: ದಲಿತರ ಭೂಮಿ ಒತ್ತುವರಿ ಆರೋಪ, ಓಡಾಡಲು ರಸ್ತೆ ಇಲ್ಲದೇ ದಲಿತರು ಕಂಗಾಲು
    • ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ
    • ಶ್ರವಣೂರು: ಭ್ರಷ್ಟಾಚಾರದ ಆರೋಪ; ಪಿಡಿಒ ವಿರುದ್ಧ ಎರಡನೇ ದಿನವೂ ಮುಂದುವರಿದ ಪ್ರತಿಭಟನೆ
    • ತುರುವೇಕೆರೆ: ಚಿರತೆ ಸಿಕ್ಕರೂ  ಗ್ರಾಮಸ್ಥರಲ್ಲಿ ದೂರವಾಗದ ಆತಂಕ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಕೆಲಸ ಮಾಡಬೇಕಿದೆ: ಶಾಸಕ ಕೆ.ಎನ್.ರಾಜಣ್ಣ
    ಮಧುಗಿರಿ July 11, 2022

    ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಕೆಲಸ ಮಾಡಬೇಕಿದೆ: ಶಾಸಕ ಕೆ.ಎನ್.ರಾಜಣ್ಣ

    By adminJuly 11, 2022No Comments2 Mins Read
    kn rajanna

    ಮಧುಗಿರಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢ ಮಾಡುವ ಅವಶ್ಯಕತೆ ಇದ್ದು, ಇದಕ್ಕೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

    ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ವೀರಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಶಾಸಕ ಆಗಿದ್ದ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಇದು ನನಗೆ ತೃಪ್ತಿ ತಂದಿದ್ದು, ಕಾರ್ಯಕರ್ತರು ಹಾಗೂ ಹೆಚ್ಚಿನದಾಗಿ ಯುವಕರು ಮನೆ ಮನೆಗೂ ತೆರಳಿ ನಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಗೂ ಈಗಿನ ಸರ್ಕಾರದ ವೈಫಲ್ಯಗಳನ್ನು ಮತದಾರರಿಗೆ ತಿಳಿಸಿ ಮನವೊಲಿಸಬೇಕು. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕ್ಷೇತ್ರವನ್ನು ಉತ್ತಮವಾಗಿ ಅಭಿವೃದ್ಧಿ ಮಾಡುವುದು, ಮಧುಗಿರಿ ಯನ್ನು ಜಿಲ್ಲೆ ಮಾಡುವುದು, ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದರ ಜೊತೆಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದ ಅವರು ಮತದಾರರು ಯಾವುದೇ ಅಮೀಶಕ್ಕೆ ಒಳಗಾಗದೆ ಅಭಿವೃದ್ಧಿ ಗೆ ಮಣೆ ಹಾಕಿ ನನಗೆ ಆಶೀರ್ವಾದ ಮಾಡಬೇಕು ಎಂದರು


    Provided by
    Provided by

    ಕೊಡಿಗೇನಹಳ್ಳಿ ಹೋಬಳಿ ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದ್ದರೂ ಸಹ ನಿಜಾಯಿತಿ ಇರುವ ಜನ ಇದ್ದಾರೆ. ಈ ಭಾಗದಿಂದ ಮುಂದಿನ ಚುನಾವಣೆಯಲ್ಲಿ ಹೆಚ್ಚು ಬಹುಮತ ಬರುವ ನಿರೀಕ್ಷೆ ಇದ್ದು, ಕಾಂಗ್ರೆಸ್ ಪಕ್ಷದಲ್ಲಿನ ಒಡಕುಗಳಿಂದ ಕಳೆದ ಬಾರಿ ನಮಗೆ ಸೋಲಾಗಿದ್ದು, ಇದನ್ನು ಸರಿಪಡಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು. ಕ್ಷೇತ್ರದಲ್ಲಿ ಕಳೆದ 4 ವರ್ಷಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಒಂದೇ ಒಂದು ಮನೆಯನ್ನೂ ಸಹ ತರಲಾಗಿಲ್ಲ, ಇದನೆಲ್ಲ ಅರಿತು ಮತದಾರರು ನಿರ್ಣಯ ತೆಗೆದುಕೊಳ್ಳಬೇಕು ಎಂದ ಅವರು ನಾನು ಸೇವೆ ಮಾಡಿ ಮತ ಕೇಳುತ್ತೇನೆ ಹೊರತು ಹಣ ಹಂಚಿ ಅಧಿಕಾರ ಪಡೆಯುವವನಲ್ಲ ಎಂದರು.

    ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಅನೇಕ ಸವಲತ್ತುಗಳನ್ನು ಪಡೆದ ಜನರೇ ನಮಗೆ ಏನು ಮಾಡಿಲ್ಲ ಎಂದು ಹೇಳಿಕೊಂಡು ಓಡಾಡುತಾರೆ ಎಂದ ಅವರು ಉಪಕಾರ ಸ್ಮರಣೆ ಇಲ್ಲದ ಮನುಷ್ಯ ಎಂದಿಗೂ ಉದ್ದಾರ ಆಗುವುದಿಲ್ಲ. ನಮ್ಮದು ಸರ್ವ ಧರ್ಮ ಹೊಂದಿರುವ ದೇಶವಾಗಿದ್ದು, ಬಿಜೆಪಿ ಸರ್ಕಾರ ಕೋಮು ಗಲಭೆ ಎಬ್ಬಿಸಿ ಜಾತಿ ಜಾತಿಗಳ ಮಧ್ಯೆ ದ್ವೇಷ ಹೊತ್ತಿಸಿ ಅಶಾಂತಿ ಉಂಟುಮಾಡುತ್ತಿದೆ ಎಂದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಪ್ರೇಮಲತಾ ರಾಮಾಂಜಿನಪ್ಪ, ಅಶ್ವತಪ್ಪ, ಉಪಾಧ್ಯಕ್ಷ ಮಂಜುನಾಥ ರೆಡ್ಡಿ, ಮುಖಂಡರುಗಳಾದ ಟಿ.ಪಿ.ಮಂಜುನಾಥ್, ವಿ.ಆರ್.ಭಾಸ್ಕರ್, ಸಂಜೀವ್ ಗೌಡ, ಆದಿನಾರಾಯಣ ರೆಡ್ಡಿ, ಪಿ.ಟಿ.ಗೋವಿಂದಪ್ಪ, ಕಾಂತರಾಜು, ಜಗದೀಶ್, ರಾಮಣ್ಣ, ನರಸೇಗೌಡ, ಬಸವರಾಜು, ಜೆ.ಡಿ.ವೆಂಕಟೇಶ್, ಸುರೇಶ್, ನರಸೀಯಪ್ಪ, ಪಂಚಾಕ್ಷರಯ್ಯ, ಸುಬ್ಬರಾಯಣ್ಣ, ಚಿಕ್ಕರಂಗಪ್ಪ, ರಂಗಶಾಮಪ್ಪ, ಲಕ್ಷ್ಮೀನರಾಸೆಗೌಡ, ನರಸಿಂಹ ಮೂರ್ತಿ, ಚೆನ್ನಾಸ್ವಾಮಿ ಗೌಡ, ಗೋವಿಂದಪ್ಪ, ರಾಜಣ್ಣ, ಮಂಜುಳಾ ನಾಗರಾಜು, ಪ್ರಸಾದ್ ರೆಡ್ಡಿ, ಶಶಿಕುಮಾರ್, ಲಿಂಗರಾಜು, ಅನಿಲ್ ಕುಮಾರ್, ಮುತ್ತೇಶ್, ಅನಿಲ್ ಕುಮಾರ್, ರಾಘವೇಂದ್ರ ಚಲಪತಿ, ರಾಜಶೇಖರ್ ಹಾಗೂ ಮುಂತಾದವರು ಇದ್ದರು.

    ಸಿದ್ದರಾಮಯ್ಯ – 75 ಅಮೃತ ಮಹೋತ್ಸವವನ್ನು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನನಗೆ ವಹಿಸಿರುವುದು ಸಂತಸ ತಂದಿದೆ. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. – ಕೆ.ಎನ್.ರಾಜಣ್ಣ, ಕೆಪಿಸಿಸಿ ಉಪಾಧ್ಯಕ್ಷರು.

    ವರದಿ: ಅಬಿದ್ ಮಧುಗಿರಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಡಿ.24ರಂದು ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಕೆ.ಪಿ. ನಟರಾಜು ಆಯ್ಕೆ

    December 19, 2025

    ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು

    December 18, 2025

    ಪಾವಗಡ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

    December 10, 2025

    Leave A Reply Cancel Reply

    Our Picks

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ವಿಕಲಚೇತನರ ಹಿತರಕ್ಷಣೆಗಾಗಿ ಕಾನೂನು ಜಾಗೃತಿ ಮೂಡಿಸುವುದು ಅಗತ್ಯ: ವಕೀಲ ಮಣಿರಾಜು

    December 24, 2025

    ಸರಗೂರು:  ವಿಕಲಚೇತನರ ಹಿತರಕ್ಷಣೆಗಾಗಿ ಇರುವ ಕಾನೂನಿನ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ’ ಎಂದು ಪ್ಯಾನೆಲ್ ವಕೀಲ ಹಾಗೂ ವಕೀಲರ…

    ಸರಗೂರು | ದೇವಲಾಪುರ ರಸ್ತೆ ಒತ್ತುವರಿ ತೆರವು: ತಹಶೀಲ್ದಾರ್ ನೇತೃತ್ವದಲ್ಲಿ ಕ್ರಮ

    December 24, 2025

    ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ: ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ, ಪರಿಶೀಲನೆ

    December 24, 2025

    ನರೇಗಾ ಹೆಸರು ಬದಲಾವಣೆ ಖಂಡನೀಯ: ಶಾಸಕ ಎಸ್.ಆರ್. ಶ್ರೀನಿವಾಸ್ ಆಕ್ರೋಶ

    December 24, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.