ಪಾಲಕ್ಕಾಡ್: ಬಾತ್ ರೂಮ್ ಕಿಟಕಿಯಲ್ಲಿ ವ್ಯಕ್ತಿಯ ನೆರಳು ಕಂಡು ಸ್ನಾನ ಮಾಡುತ್ತಿದ್ದ ಮಹಿಳೆ ಬೆಚ್ಚಿಬಿದ್ದಿದ್ದು, ಮಹಿಳೆ ಕಿರುಚಿ ಕೊಂಡಾಗ ವ್ಯಕ್ತಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದ್ದು, ಆರೋಪಿಯನ್ನು ಕೇರಳ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಶಹಜಹಾನ್ ಎಂದು ಗುರುತಿಸಲಾಗಿದೆ. ಈತ ಕೊಡುಂಬಾ ನಿವಾಸಿಯಾಗಿದ್ದು, ಸಿಪಿಎಂ ಪಕ್ಷದ ಮಾಜಿ ನಾಯಕನಾಗಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ಧ ಜಾಮೀನು ರಹಿತ ಕಾಯ್ದೆ ದಾಖಲಿಸಲಾಗಿದೆ.
ಬಾತ್ ರೂಮ್ ಕಿಟಕಿಯ ಬಳಿ ನಿಂತು ಮಹಿಳೆಯ ಅಶ್ಲೀಲ ಚಿತ್ರ ವಿಡಿಯೋ ಮಾಡುತ್ತಿದ್ದ ಶಹಜಹಾನ್ ನ ನೆರಳು ನೋಡಿ ಮಹಿಳೆ ಕಿರುಚಿಕೊಂಡಿದ್ದು, ಈ ವೇಳೆ ಆರೋಪಿ ಗಾಬರಿಯಿಂದ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಪರಾರಿಯಾಗುತ್ತಿದ್ದ ವೇಳೆ ಆತನ ಮೊಬೈಲ್ ಮೈದಾನದ ಬಳಿ ಬಿದ್ದಿತ್ತು. ರಹಸ್ಯ ಕ್ಯಾಮೆರಾವನ್ನು ಅಳವಡಿಸಿದ್ದೇ ಶಹಜಹಾನ್ ಎಂದರಿಯದ ಮಹಿಳೆ ಸಹಾಯಕ್ಕಾಗಿ ಶಹಜಹಾನ್ ನೆರವಿಗಾಗಿ ಕರೆ ಮಾಡಿದ್ದಾಳೆ. ಈ ವೇಳೆ ಮೈದಾನದಲ್ಲಿದ್ದ ಮೊಬೈಲ್ ರಿಂಗ್ ಆಗಿದ್ದು, ಇದರಿಂದಾಗಿ ಶಹಜಹಾನ್ ಮೇಲೆ ಅನುಮಾನ ಮೂಡಿತ್ತು. ಆ ಮೊಬೈಲ್ ನ್ನು ಪರಿಶೀಲಿಸಿದಾಗ ಅಶ್ಲೀಲ ವಿಡಿಯೋಗಳು ಪತ್ತೆಯಾಗಿತ್ತು.
ತಕ್ಷಣವೇ ಮಹಿಳೆ ಮೊಬೈಲ್ ನೊಂದಿಗೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಶಹಜಹಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನುವ ಮಾಹಿತಿ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz