1993ರ ಪಾಲಾರ್ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್(69) ನಿಧನರಾಗಿದ್ದಾರೆ. 29 ವರ್ಷಗಳ ಕಾಲ ಬೆಳಗಾವಿ ಹಾಗೂ ಮೈಸೂರು ಜೈಲಿನಲ್ಲಿದ್ದ ಜ್ಞಾನಪ್ರಕಾಶ್, ಜಾಮೀನಿನ ಮೇಲೆ ಮೈಸೂರು ಜೈಲಿನಿಂದ 2022ರ ಡಿಸೆಂಬರ್ 20 ರಂದು ಬಿಡುಗಡೆಯಾಗಿದ್ದರು.
ಮೃತ ಜ್ಞಾನಪ್ರಕಾಶ್ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೀಗಾಗಿ, ಮಾನವೀಯತೆ ಆಧಾರದ ಮೇಲೆ ಸುಪ್ರೀಂಕೋರ್ಟ್ ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಜ್ಞಾನಪ್ರಕಾಶ್ ಅವರು ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಮಾರ್ಟಳ್ಳಿ ಸಮೀಪ ಸಂದನಪಾಳ್ಯದಲ್ಲಿ ವಾಸವಿದ್ದರು.


