ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜನವರಿ 12ರಂದು ಮತ್ತೆ ಹೋರಾಟ ನಡೆಸುತ್ತೇವೆ. ಸಿಎಂ ಬೊಮ್ಮಾಯಿ ಮನೆ ಮುಂದೆಯೇ ಸಂಕ್ರಾಂತಿ ಆಚರಿಸಿ ಪ್ರತಿಭಟಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,2D ಮತ್ತು 2Cಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳಿತು. ನಾವು ಕಾನೂನು ತಜ್ಞರನ್ನು ಕರೆದು ಚರ್ಚಿಸಿದೆವು.
110ಕ್ಕೂ ಹೆಚ್ಚು ವಕೀಲರನ್ನು ಸೇರಿಸಿ ಚರ್ಚಿಸಿದೆವು. ನಮ್ಮ ಕಾನೂನು ತಜ್ಞರು ಇದನ್ನು ತಿರಸ್ಕರಿಸಲು ಹೇಳಿದ್ದಾರೆ. ಆದರೆ ನಾವು ಜನವರಿ 13 ರಂದು ಸಿಎಂ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.
ಒಂದು ವಾರ ಕಾಯೋಣ ಎಂದು ಕಾದೆವು. ಕೊನೆಗೂ ಏನು ಸ್ಪಂದಿಸದೆ ಹೋರಾಟಕ್ಕೆ ಬಂದ ಜನರ ಮನಸ್ಸಿಗೆ ಭಾರವಾದರೂ ನಮ್ಮ ಮನವಿಗೆ ವಾಪಸ್ ಮನೆಗಳಿಗೆ ತೆರಳಿದ್ದರು ಎಂದು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


