ಮಧುಗಿರಿ: ಜೆಡಿಎಸ್ ಪಕ್ಷ ತೊರೆದ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಹೇಶ್ ರವರಿಗೆ ಗಂಜಲಗುಂಟೆ ಪಂಚಾಯತ್ ಅಧ್ಯಕ್ಷ ಸ್ಥಾನ ಒಲಿಯಿತು.
ಪಂಚಾಯತ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಹೇಶ್ ಮಾತನಾಡಿ, ಈ ದಿನ ನಾನು ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ, ಸಹಕಾರ ಸಚಿವರ ಸಹಕಾರದಿಂದ ಗಂಜನಗುಂಟೆ ಪಂಚಾಯತ್ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದ್ದೇನೆ, ಪಂಚಾಯತ್ ಅಭಿವೃದ್ಧಿಗಾಗಿ ಸದಾ ಸದಸ್ಯರ ಜೊತೆಗೂಡಿ ಹಾಗೂ ಸಚಿವರ ನಿರ್ದೇಶನದಂತೆ ಪಕ್ಷ ಸಂಘಟನೆ ಕೆಲಸ ಮಾಡುವೆ ಎಂದು ತಿಳಿಸಿದರು.
ಪುರಸಭೆ ಸದಸ್ಯ ಲಾಲಾ ಪೇಟೆ ಮಂಜುನಾಥ ಮಾತನಾಡಿ, ಕ್ಷೇತ್ರ ಜನಪ್ರಿಯ ಶಾಸಕರು ಹಾಗೂ ಸಚಿವರಾದ ಕೆ ಎನ್ ರಾಜಣ್ಣ ರವರ ನಿರ್ದೇಶನದಂತೆ ಬಹಳ ಸುಲಲಿತವಾಗಿ ಗಂಜಲಗುಂಟೆ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಪಂಚಾಯಿತಿ ಅಧ್ಯಕ್ಷನಾಗಿ ಮಹೇಶ್, ಉಪಾಧ್ಯಕ್ಷರಾಗಿ ನಾಗಭೂಷಣ್ ಅವಿರೋಧವಾಗಿ ಆಯ್ಕೆಯಾಗಿದ್ದು ತುಂಬಾ ಸಂತೋಷ ತಂದಿದೆ, ಇವರು ಮುಂದಿನ ದಿನಗಳಲ್ಲಿ ಪಂಚಾಯತಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಒತು ನೀಡಿ ಕೆಲಸ ಮಾಡಲಿ ಹಾಗೂ ಕಾಂಗ್ರೆಸ್ ಪಕ್ಷ ಸಂಘಟನೆಗೆ ಮುಂದಾಗಲಿ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಬಿ.ಮರಿಯಾಣ, ಡಿ.ಎಚ್.ನಾಗರಾಜ್, ವೀರೇಶ್ ಸಾವಿತ್ರಮ್ಮ, ನರಸಿಂಹಮೂರ್ತಿ ಹಾಗೂ ಸದಸ್ಯರು ಇತರರು ಇದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


