ಪಾವಗಡ: ಹೋಬಳಿಯ ಶಕ್ತಿಸ್ಥಳವಾಗಿರುವಂತಹ ನಾಡಕಚೇರಿಗೆ ತರಲು ಸೂಕ್ತ ರಸ್ತೆ ಇಲ್ಲದಂತಾಗಿದೆ . ವೈ ಎನ್ ಹೊಸಕೋಟೆ ಹೋಬಳಿಯ ನಾಡಕಚೇರಿ ಬಳಿಯ ರಸ್ತೆ ಕೆಸರು ಗದ್ದೆಯಂತಾಗಿದೆ. ಇದೇ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವ ದುಸ್ಥಿತಿ ಇದೆ.
ನಾಡಕಚೇರಿ ಪ್ರಾರಂಭವಾಗಿ ಮೂರು ವರ್ಷಗಳು ಕಳೆದರೂ ಕಾಂಪೌಂಡ್ ನಿರ್ಮಿಸಿಲ್ಲ , ಕಚೇರಿಗೆ ಹೋಗಲು ದಾರಿ ಇಲ್ಲ. ಜೊತೆಗೆ ನಾಡಕಚೇರಿ ಇದೆ ಎನ್ನುವ ಸೂಚನಾ ಫಲಕವು ಸಹ ಇಲ್ಲದಿರುವುದು ವಿಪರ್ಯಾಸವೇ ಸರಿ.
ಇದೊಂದೇ ಅಲ್ಲದೆ ನಾಡ ಕಚೇರಿಯಲ್ಲಿ ಇರಬೇಕಾದಂತಹ ಮೂಲ ಸೌಕರ್ಯಗಳು ಇಲ್ಲದಿರುವುದು ಇಲ್ಲಿನ ಆಡಳಿತ ವೈಖರಿಗಿಡಿದ ಕೈಗನ್ನಡಿಯಾಗಿದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಗತಿಪರರು ಹಲವು ಬಾರಿ ಮನವಿ ಮಾಡಿದರು ಸಹ ಯಾವುದೇ ಗಮನಹರಿಸಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q