ಕರ್ನಾಟಕ ಅಂಚೆ ವೃತ್ತದ ‘ಡೋರ್ ಸ್ಟೆಪ್ ಬುಕ್ಕಿಂಗ್ ಆಫ್ ಪಾರ್ಸೆಲ್ಸ್ ಮೊಬೈಲ್ ವ್ಯಾನ್ಸ್’ ಸೇವೆ ಬೆಂಗಳೂರಿನ ಎಂ. ಜಿ. ರಸ್ತೆಯಲ್ಲಿರುವ ಮಣಿಪಾಲ್ ಸೆಂಟರ್‌ನಲ್ಲಿ ಸೋಮವಾರ ಆರಂಭಗೊಂಡಿತು.
ನಿಗದಿತ ಪ್ರದೇಶದ ಸಾರ್ವಜನಿಕರು ಪಾರ್ಸೆಲ್ ಬುಕ್ಕಿಂಗ್ ಸೇವೆಯನ್ನು ಹೆಚ್ಚಿನ ಶುಲ್ಕ ನೀಡದೇ ಪಡೆಯಬಹುದು. ಮೊಬೈಲ್ ವ್ಯಾನ್ ನಿತ್ಯ ಮಧ್ಯಾಹ್ನ 2. 30ಕ್ಕೆ ಮಣಿಪಾಲ್ ಸೆಂಟರ್‌ಗೆ ಬರಲಿದ್ದು, 3. 30ರವರೆಗೆ ಇರಲಿದೆ. ಬೇಡಿಕೆ ಆಧರಿಸಿ ಬೆಂಗಳೂರಿನ ಇತರೆಡೆಗೆ ಈ ಸೇವೆ ವಿಸ್ತರಿಸುವ ಉದ್ದೇಶವಿದೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಮಾಹಿತಿ ನೀಡಿದರು.
ಬೆಂಗಳೂರು ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಪಾರ್ಸೆಲ್ ಬುಕ್ ಮಾಡಲು ಮೊಬೈಲ್ ಸಂಖ್ಯೆ 94808 09797 ಸಂಪರ್ಕಿಸಬಹುದು.
ಪ್ರಾಯೋಗಿಕವಾಗಿ 20 ದಿನದ ಹಿಂದೆ ಅಬ್ಬಿಗೆರೆ-ಪೀಣ್ಯದಲ್ಲಿ ಆರಂಭಿಸಿದ್ದೆವು. ಈವರೆಗೆ 1, 124 ಪಾರ್ಸೆಲ್ ಗಳು ಬಂದಿವೆ ಎಂದರು. ‘ಎಂ. ಜಿ. ರಸ್ತೆ ಹೆಚ್ಚು ವಾಣಿಜ್ಯ ಸಂಕೀರ್ಣಗಳಿರುವ ಪ್ರದೇಶವಾಗಿದ್ದು, ಇಲ್ಲಿ ಜನರಿಗೆ ಹೆಚ್ಚು ಅನುಕೂಲಕರ’ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


