ಕಾರವಾರ: ಮೊಬೈಲ್ ಚಾರ್ಜರ್ ನ್ನು ಕಚ್ಚಿದ 8 ತಿಂಗಳ ಮಗುವೊಂದು ವಿದ್ಯುತ್ ಶಾಕ್ ತಗಲಿ ದಾರುಣವಾಗಿ ಮೃತಪಟ್ಟ ಘಟನೆ ಸಿದ್ದರ ಗ್ರಾಮಲ್ಲಿ ನಡೆದಿದೆ.
ಗ್ರಾಮದ ಸಂತೋಷ್ ಕಲ್ಗುಟ್ಕರ್, ಸಂಜನಾ ದಂಪತಿಯ 8 ತಿಂಗಳ ಸಾನಿಧ್ಯ ಮೃತಪಟ್ಟ ಮಗು. ಪೋಷಕರು ಮನೆಯಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಂಡು ಬಟನ್ ಆಫ್ ಮಾಡದೆ ಹಾಗೇ ಬಿಟ್ಟಿದ್ದರು. ಆಟವಾಡುತ್ತಾ ಬಂದ ಮಗು ಚಾರ್ಜರ್ ನ್ನು ಬಾಯಿಗೆ ಇಟ್ಟುಕೊಂಡಿದೆ. ಪರಿಣಾಮವಾಗಿ ವಿದ್ಯುತ್ ಶಾಕ್ ತಗಲಿ ಮಗು ಸಾವನ್ನಪ್ಪಿದೆ.
ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


