ಬೆಂಗಳೂರು: ನಾಳೆ 75 ನೇ ಗಣರಾಜ್ಯೋತ್ಸವಕ್ಕೆ ಬೆಂಗಳೂರು ಸಿದ್ಧವಾಗಿದೆ. ಇನ್ನೂ ಗಣರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆ ಹಲವು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.
ಸೆಂಟ್ರಲ್ ಸ್ಟ್ರೀಟ್ -ಅನಿಲ್ ಕುಂಬ್ಳೆ ರಸ್ತೆಯಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೂ, ಕಬ್ಬನ್ ರಸ್ತೆ-ಸಿಟಿ ಓ ವೃತ್ತದಿಂದ ಕೆ. ಆರ್. ರಸ್ತೆ ಮತ್ತು ಕಬ್ಬನ್ ಜಂಕ್ಷನ್‌ವರೆಗೆ, ಎಂಜಿ ರೋಡ್ -ಅನಿಲ್ ಕುಂಬ್ಳೆ ವೃತ್ತದಿಂದ ಕ್ಲೀನ್ಸ್ ವೃತ್ತದವರೆಗೆ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಈ ಬಗ್ಗೆ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ ಸಂಚಾರಿ ಪೊಲೀಸರು ಕೆಲವೊಂದು ರಸ್ತೆಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದಾರೆ. ಇನ್ ಫಾಂಟ್ರಿ ರಸ್ತೆಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಆಗಿದೆ. ಮಣಿಪಾಲ್ ಸೆಂಟರ್ ಗೆ ತೆರಳುವ ವಾಹನಗಳು ಕಬ್ಬನ್ ರಸ್ತೆ ಮೂಲಕ ತೆರಳಬೇಕು. ಕಬ್ಬನ್ ರಸ್ತೆ, ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿಆರ್ ವಿ ಜಂಕ್ಷನ್ ಕಡೆ ಸಂಚಾರವನ್ನ ನಿರ್ಬಂಧ ಮಾಡಲಾಗಿದೆ. ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.


