ತುರುವೇಕೆರೆ: ತಾಲೂಕು ಕಸಬಾ ಹೋಬಳಿ ಎನ್.ಮಾವಿನಹಳ್ಳಿ ಗ್ರಾಮ ನಿವಾಸಿ ಮೂಡಲಗಿರಿಯಪ್ಪ ಎಂಬ ವ್ಯಕ್ತಿಯೊಬ್ಬರು ತನ್ನ ಎರಡು ಮೂತ್ರಪಿಂಡಗಳ ವೈಫಲ್ಯದಿಂದ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ.
ಸುಮಾರು 2 ವರ್ಷಗಳಿಂದಲೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚಿಕಿತ್ಸೆ ವೆಚ್ಚ ಭರಿಸಲಾಗದೇ ಅವರು ಕಂಗಾಲಾಗಿದ್ದು, ದಾನಿಗಳಿಂದ ಸಹಾಯ ಹಸ್ತಚಾಚಿದ್ದಾರೆ.
ಮೂಡಲಗಿರಿಯಪ್ಪನವರಿಗೆ ಅವರ ಪತ್ನಿ ಮೂತ್ರಪಿಂಡ ದಾನ ಮಾಡಲು ಮುಂದಾಗಿದ್ದಾರೆ. ಮೂತ್ರಪಿಂಡ ಅಳವಡಿಸಲು ಸುಮಾರು 10 ಲಕ್ಷಕ್ಕೂ ಅಧಿಕ ಖರ್ಚಾಗಲಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಇವರ ಬಳಿಯಲ್ಲಿ ಅಷ್ಟೊಂದು ಹಣವನ್ನು ಹೊಂದಿಸುವುದು ಕಷ್ಟಕರವಾಗಿದೆ.
ಹೀಗಾಗಿ ದಂಪತಿಯು ಸಹೃದಯರ ನೆರವು ಕೇಳಿದ್ದು, ಸಾರ್ವಜನಿಕರು ತಮ್ಮಿಂದಾದ ಸಹಾಯವನ್ನು ಮಾಡುವ ಮೂಲಕ ಒಂದು ಕುಟುಂಬದ ಆಧಾರವಾಗಿರುವ ವ್ಯಕ್ತಿಯನ್ನು ಉಳಿಸಿಕೊಳ್ಳಲು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ನೆರವು ನೀಡುವವರು ಸಂತ್ರಸ್ತರ ಬ್ಯಾಂಕ್ ವಿವರಗಳಿಗೆ ನೆರವನ್ನು ನೇರವಾಗಿ ನೀಡಬಹುದು. ವಿವರ ಹೀಗಿದೆ:
SBI ಖಾತೆ ಸಂಖ್ಯೆ: 64 11 9 2009 74
IFSC ಕೋಡ್ SBIN 0 0 4 0 1 05
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಾಣಸಂದ್ರ ಶಾಖೆ ತುರುವೇಕೆರೆ ತಾಲೂಕು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy