ಸರಗೂರು: ತನ್ನ ಪತ್ನಿಯಿಂದಲೇ ವ್ಯಕ್ತಿಯೊಬ್ಬ ಹತ್ಯೆಯಾಗಿರುವ ಘಟನೆ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಮುಳ್ಳೂರು ಗ್ರಾಮದ ನಿವಾಸಿ ಬಸವರಾಜು(41) ಮೃತ ದುರ್ದೈವಿ. ಈತನ ಪತ್ನಿ ನೇತ್ರಾವತಿ(26) ಎಂಬವವರು ತನ್ನ ಪತಿ ಮನೆಯ ಖರ್ಚಿಗೆ ಸರಿಯಾಗಿ ಹಣ ನೀಡುತ್ತಿಲ್ಲ ಮತ್ತು ತನ್ನ ಗಂಡನಿಗೆ ಬೇರೆ ಕಡೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಿಂದ ಹಾಗಾಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಶುಕ್ರವಾರ ರಾತ್ರಿ ಬಸವರಾಜ್ ಮನೆಗೆ ಬಂದ ವೇಳೆ ಪತಿ ಪತ್ನಿಯರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಹೆಂಡತಿ ತನ್ನ ಗಂಡನ ಗುಪ್ತಾಂಗಕ್ಕೆ ಹೊಡೆದಿದ್ದು, ಪರಿಣಾಮವಾಗಿ ಬಸವರಾಜು ಸಾವನ್ನಪ್ಪಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ದಂಪತಿಗಳಿಗೆ 5 ವರ್ಷದ ಮಗು ಕೂಡ ಇದೆ ಎನ್ನಲಾಗಿದೆ.
ಈ ಬಗ್ಗೆ ಬಸವರಾಜು ಅವರ ಅಣ್ಣ ಗುರುಸ್ವಾಮಿ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನೇತ್ರಾವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಆರಂಭಿಸಿದ್ದಾರೆ.
ವರದಿ: ಚಂದ್ರ ಹಾದನೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy