ಹೆಚ್.ಡಿ.ಕೋಟೆ: ಪತ್ರಕರ್ತರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಯತ್ನಿಸಿದ್ದಲ್ಲದೇ ಜೀವ ಬೆದರಿಕೆಯೊಡ್ಡಿದ ಆರೋಪ ಕೇಳಿ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.
ತಾಲ್ಲೂಕಿನ ಪಟ್ಟಣದ ವಾಯುವಿಹಾರ ಹೋಗಿದ್ದ ಸಮಯದಲ್ಲಿ ಪತ್ರಕರ್ತ ಹಾದನೂರು ದೊಡ್ಡಸಿದ್ದು ಅವರಿಗೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗಿರಿಗೌಡ ಮತ್ತು ಕುಟುಂಬದವರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತ ತಾಲ್ಲೂಕು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಸದಸ್ಯರು ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಮತ್ತು ತಹಶೀಲ್ದಾರ್ ರತ್ನಾಂಬಿಕೆಯವರನ್ನು ಭೇಟಿ ಮಾಡಿ, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದು, ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆ ವಿವರ:
ಏಪ್ರಿಲ್ ಕಳೆದ 27ರ ಶುಕ್ರವಾರ ಬೆಳಿಗ್ಗೆ 6:20 ಸಮಯದಲ್ಲಿ ಪತ್ರಕರ್ತ ಹಾದನೂರು ದೊಡ್ಡಸಿದ್ದು, ತಮ್ಮ ಪತ್ನಿಯೊಂದಿಗೆ ವಾಯುವಿಹಾರಕ್ಕೆ ತೆರಳಿದ ಸಂದರ್ಭ , ಹುಣಸೂರು ಬೇಗೂರು ಹೆದ್ದಾರಿಯ ಹೆಬ್ಬಳ ಸಮೀಪದ ರಾಜಗೋಪಾಲ್ ಮನೆಯ ಹತ್ತಿರ ಎದುರಾದ ಗಿರಿಗೌಡ ಮತ್ತು ಪತ್ನಿ ಪುರಸಭೆ ಸದಸ್ಯೆ ಗೀತಾಗಿರಿಗೌಡ ಏಕಾಏಕಿ ಇಲ್ಲ ಹಲ್ಲದ ಕೊಂಕು ಮಾತುಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ದೊಡ್ಡಸಿದ್ದು, ಹೆಚ್.ಡಿ.ಕೋಟೆಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಹೆಚ್.ಡಿ. ಕೋಟೆ ಪೊಲೀಸರು ಗಿರಿಗೌಡ ಮೇಲೆ ತನಿಖೆ ನಡೆಸುತ್ತಿದ್ದಾರೆ.
ತಹಶೀಲ್ದಾರ್ ಗೆ ಮನವಿ ಸಲ್ಲಿಸುವ ವೇಳೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ್ ಆರಾಧ್ಯ, ಉಪಾಧ್ಯಕ್ಷ ಮಂಜುಕೋಟೆ, ಕಾರ್ಯದರ್ಶಿ ಮಂಜುಬೀಚನಹಳ್ಳಿ, ಖಜಾಂಚಿ ಹಾದನೂರು ದೊಡ್ಡಸಿದ್ದು, ಜಿಲ್ಲಾ ನಿರ್ದೇಶಕ ರವಿಕುಮಾರ್, ಸಂಘದ ನಿರ್ದೇಶಕರಾದ ಪುರುಷೋತ್ತಮ್, ಪುಟ್ಟರಾಜು.ಪಿ ಸುರೇಶ್, ಹಂಪಾಪುರ ನಾಗೇಶ್, ಎಡತೋರೆ ಮಹೇಶ್, ಸದಸ್ಯರಾದ ಎಚ್.ಬಿ.ಬಸವರಾಜು, ಕನ್ನಡ ಪ್ರಮೋದ್ರಘು ವಾಸುಕಿ ನಾಗೇಶ್, ರಂಗರಾಜು, ನಂದಕುಮಾರ್ , ಪುರುಷೋತ್ತಮ್, ನಿಂಗಣ್ಣಕೋಟೆ, ಜೈಶಿಲಾ, ರವಿ ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


