ಪಾವಗಡ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಪಾವಗಡ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕೇಸರಿ ಶಾಲು.ಮತ್ತು ಕೇಸರಿ ಟೋಪಿಗಳು ರಾರಾಜಿದವು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ್, ಭ್ರಷ್ಟಾಚಾರ ರಹಿತ ತಾಲೂಕು ಮಾಡಲು ಈ ಬಾರಿ ಬಿಜೆಪಿ ಪಕ್ಷಕ್ಕೆ ಮತ ಹಾಕಿ, ಒಂದು ಬಾರಿ ಅಧಿಕಾರ ಕೊಟ್ಟು ನೋಡಿ ವಾರಕ್ಕೊಮ್ಮೆ ನಿಮ್ಮ ಗ್ರಾಮಗಳಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆ ಬಗ್ಗೆ ಪರಿಹರಿಸಿಕೊಡುತ್ತೇನೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಮತ್ತು ಮೋದಿಜಿಯವರು ನೀಡುತ್ತಿರುವ ಉತ್ತಮ ಆಡಳಿತದ ಮೆಚ್ಚಿ ಈ ಭಾಗದಲ್ಲಿ ಕೆಲಸ ಮಾಡಲು ಒಂದು ಅವಕಾಶ ಕಲ್ಪಿಸಿಕೊಡಿ, ನಿಮ್ಮ ಮನೆ ಮಗನ ರೀತಿಯಲ್ಲಿ ಕೆಲಸ ಮಾಡಿಕೊಂಡುತ್ತೇನೆ ಎಂದರು.
ಪಾವಗಡ ಎಪಿಎಂಸಿ ಆವರಣದಿಂದ ತಾಲ್ಲೂಕು ಕಚೇರಿಯ ಉದ್ದಕ್ಕೂ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ನಾಮಪತ್ರ ಸಲ್ಲಿಸಿ ನಂತರ ಬಹಿರಂಗ ಸಭೆಯಲ್ಲಿ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಬಿಜೆಪಿ ಕೇಂದ್ರದ ಉಸ್ತುವಾರಿ ಗಜೇಂದ್ರ ಸಲೋಜಾ, .ಜಿಲ್ಲಾ ಚುನಾವಣೆ ಉಸ್ತವಾರಿ ಹೆಚ್.ಎನ್.ಚಂದ್ರಶೇಖರ, ತಾಲೂಕು ಅಧ್ಯಕ್ಷರು ರವಿಶಂಕರ್ ನಾಯ್ಕ್, ಕೊತ್ತುರ್ ಹನುಮಂತರಾಯಪ್ಪ, ಶಿವಕುಮಾರ್ ಸಾಕೆಲಾ, ಡಾ.ವೆಂಕಟರಾಮಯ್ಯ, ಡಾ.ಚಕ್ಕರ್ ರೆಡ್ಡಿ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ದೊಡ್ಡಹಳ್ಳಿ ಅಶೋಕ್, ಅಲ್ಪಸಂಖ್ಯಾತರ ಜಿಲ್ಲಾ ಉಪಾಧ್ಯಕ್ಷ ನೂರ್ ಅಹಮದ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಸೀತಾರಾಮನಾಯ್ಕ್, ಜಿಲ್ಲಾ ಉಪಾಧ್ಯಕ್ಷ ಗಾಯಿತ್ರಿದೇವಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಗಿರೀಶ, ರಂಗಣ್ಣ.ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ರಾಘವೇಂದ್ರ, ಅಲ್ಕುಂದ್ ರಾಜ್, ರಂಗಣ್ಣ, ಬ್ಯಾಟರಿ ಕೃಷ್ಣಪ್ಪ, ನಾಗರಾಜು ಬಿಜೆಪಿ ಮುಖಂಡ ಕೊತ್ತೂರು ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy