ಪಾವಗಡ: ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಹೆಲ್ಪ್ ಸೊಸೈಟಿ, ಸೇವಾ ಟ್ರಸ್ಟ್ ವತಿಯಿಂದ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ಕಣ್ಣಿಗೆ ಸಂಬಂಧ ಪಟ್ಟ ತೊಂದರೆಗಳಿಗೆ ಪರೀಕ್ಷೆಗಳನ್ನು ನಡೆಸಲಾಯಿತು. ಶಿಬಿರದಲ್ಲಿ ಕಣ್ಣಿಗೆ ಸಂಬಂಧಪಟ್ಟ ತೊಂದರೆಗಳಿಗೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ 60 ರೋಗಿಗಳಿಗೆ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಶಿಬಿರದ ಕಾರ್ಯಕ್ರಮಕ್ಕೆ ಸುರಪನೆನಿ ವಿದ್ಯಾ ಸಂಸ್ಥೆಯ ವಿದ್ಯಾ ಸಾಗರ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಸೇವಾ ಟ್ರಸ್ಟಿನ ಶ್ರೀಮತಿ ಸಂದ್ಯಾ, ಶಂಕರ ಕಣ್ಣಿನ ಆಸ್ಪತ್ರೆ ವೈದ್ಯರಾದ ರವಿಕುಮಾರ್, ಶಿಬಿರದ ಮೇಲ್ವಿಚಾರಕರಾದ ಹರೀಶ್ ಕುಮಾರ್, ಸೇವಾ ಟ್ರಸ್ಟ್ ನಿರ್ದೇಶಕರಾದ ನರಸಿಂಹಮೂರ್ತಿ, ಮಾನಂ ಗೌತಮ, ಶಂಕರ್ ಆಸ್ಪತ್ರೆ ಸಿಬ್ಬಂದಿ , ಸಾರ್ವಜನಿಕ ಆಸ್ಪತ್ರೆಯ, ಸಿಬ್ಬಂದಿ ವರ್ಗದವರು ಮತ್ತು ಮುಂತಾದವರಿದ್ದರು.
ವರದಿ: ನಂದೀಶ್ ನಾಯ್ಕ ಪಿ.