ವೈ.ಎನ್.ಹೊಸಕೋಟೆ: ಗ್ರಾಮದ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಶುಕ್ರವಾರದಂದು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ತುಮಕೂರು ಜಿಲ್ಲಾ ಅಂದತ್ವ ನಿಯಂತ್ರಣಾ ಸಂಸ್ಥೆ ಸೇವಾ ಟ್ರಸ್ಟ್ ಮತ್ತು ಪಾವಗಡದ ಹೆಲ್ಪ್ ಸೊಸೈಟಿ ವತಿಯಿಂದ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನುಉದ್ಘಾಟಿಸಿದ ಶ್ರೀ ಚೌಡೇಶ್ವರಿ ಸಮುದಾಯ ಭವನದ ಅಧ್ಯಕ್ಷರಾದ ಜಿ.ಬಿ.ಸತ್ಯನಾರಾಯಣ ಮಾತನಾಡಿ, ಹಲವು ವರ್ಷಗಳಿಂದ ತಾಲ್ಲೂಕಿನಾದ್ಯಂತ ಹೆಲ್ಪ್ ಸೊಸೈಟಿ ವಿವಿಧ ಸಮಾಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಆ ಮೂಲಕ ಹಲವರ ನೋವನ್ನು ಅಳಿಸುವ ಪ್ರಯತ್ನ ಮಾಡುತ್ತಿದೆ. ಈ ಸೇವೆ ನಿತ್ಯ ನಿರಂತರವಾಗಲಿ. ಅಶಕ್ತರಿಗೆ ಆಸರೆಯಾಗಲಿ ಎಂದು ತಿಳಿಸಿದರು.
ಹೆಲ್ಪ್ ಸೊಸೈಟಿಯ ಅಧ್ಯಕ್ಷ ಮಾತನಾಡಿ, ಪ್ರತಿ ತಿಂಗಳು ವೈ.ಎನ್.ಹೊಸಕೋಟೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆಸಕ್ತರು ಇದರ ಉಪಯೋಗ ಪಡೆದುಕೊಳ್ಳಬಹುದು. ತಾಲ್ಲೂಕಿನಲ್ಲಿ ಶಿಕ್ಷಣ ಆರೋಗ್ಯ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಸಂಘಟನೆಯು ಎಲ್ಲರ ಸಹಕಾರದ ಮೇರೆಗೆ ಕೈಲಾದ ಸೇವೆಯನ್ನು ಸಲ್ಲಿಸುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.
ಶಿಬಿರದಲ್ಲಿ 93 ಜನ ಭಾಗವಹಿಸಿ ತಪಾಸಣೆಗೆ ಒಳಗಾದರು. ಅದರಲ್ಲಿ 36 ಜನರು ಶಸ್ತ್ರ ಚಿಕಿತ್ಸೆ ಆಯ್ಕೆಯಾದರು. ವೈದ್ಯರಾದ ಡಾ.ಅನಿತಾ ರೆಡ್ಡಿ, ಲತಾ, ಮಾಧವಿ, ಕ್ಷೇತ್ರ ಅಧಿಕಾರಿ ಹರೀಶ್ ಎಂ.ಎಸ್, ಸಮುದಾಯ ಭವನದ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರಾದ ಚಂದ್ರಶೇಖರ್ ಇದ್ದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


