ಪಾವಗಡ: ತಾಲ್ಲೂಕಿನ ನಿಡಗಲ್ ವಲಯದ ಮದ್ದೆ ಗ್ರಾಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾಮಿ೯ಕ ಸಭಾ ಕಾರ್ಯಕ್ರಮವನ್ನ ಕೆ.ಎಂ.ಪ್ರಭಾಕರ ಪಾವಗಡ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸವ೯ಜನಾಂಗಗಳ ಎಲ್ಲಾ ವಗ೯ಗಳ ಜನರು ಕೂಡಿಕೊಂಡು ಸರಳ ಸಾಮೂಹಿಕ ಸತ್ಯನಾರಾಯಣ ಪೂಜೆಗೆ ಅವಕಾಶ ಮಾಡಿ ಕೊಟ್ಟಂತಹ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರಿಗೆ ನಿಮ್ಮೆಲ್ಲರ ಪರವಾಗಿ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆಂದು ತಿಳಿಸಿದರು.
ಪಾವಗಡ ತಾಲೂಕಿನ ಮಾನ್ಯ ತಾಲೂಕು ಯೋಜನಾಧಿಕಾರಿಗಳಾದ ಮಹೇಶ್ ರವರು ಪೂಜ್ಯರ ದೂರದೃಷ್ಠಿ ಆಶಯದಂತೆ ನಮ್ಮ ತಾಲ್ಲೂಕಿನಲ್ಲಿ ಸ್ವ –ಸಹಾಯ ಸಂಘಗಳ ಮೂಲಕ ಯೋಜನೆಯಿಂದ ಅನುಷ್ಠಾನಗೊಳ್ಳುವ ಅನೇಕ ಜನಪರ ಕಾಯ೯ಕ್ರಮಗಳ ನಮ್ಮೂರ ನಮ್ಮ ಕೆರೆ ಜ್ಞಾನವಿಕಾಸ ಕಾರ್ಯಕ್ರಮಗಳು ಲಾಭಾಂಶ ವಿತರಣೆ, ಸುಜ್ಞಾನ ಶಿಷ್ಯ ವೇತನ ಜ್ಞಾನದೀಪ. ಶಿಕ್ಷಕರ ನಿಯೋಜನೆ ಸಿ ಎಸ್ ಸಿ ಕಾರ್ಯಕ್ರಮಗಳು ಇನ್ನೂ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀವ೯ಚನ ನೀಡಿ ಮಾತನಾಡಿದ ಕೊರಟಗೆರೆ ಪೂಜ್ಯ ಬಸವಮಹಾಲಿಂಗ ಮಹಾಸ್ವಾಮಿಗಳು, ಧಮ೯ಸ್ಥಳದ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರ ಮಾಗ೯ದಶ೯ನದಲ್ಲಿ ಸಾವ೯ಜನಿಕರ ಸಹಭಾಗಿತ್ವದಲ್ಲಿ ಜನರಲ್ಲಿ ಸತ್ಯ ಧಮ೯ ಸಂಸ್ಕೃತಿ ಬಗ್ಗೆ ಇಂತಹ ವಿವಿಧ ಧಾಮಿ೯ಕ ಸಭಾಕಾಯ೯ಕ್ರಮಗಳನ್ನ ಆಯೋಜನೆ ಮಾಡಿ ಜನರಲ್ಲಿ ತಿಳುವಳಿಕೆ ಮಾಡಿಸುತ್ತಿರುವುದು ದೇಶದಲ್ಲಿ ಶ್ಲಾಘನೀಯ. ನೀವೆಲ್ಲರೂ ಪುಣ್ಯವಂತರು ಸುಸಂಸ್ಕ್ರತರಾಗಿ ಬದುಕಬೇಕೆಂದು ಆಶೀವ೯ಚಸಿದರು.
ಕಾಯ೯ಕ್ರಮದ ಅಧ್ಯಕ್ಷತೆ ಗುರುಪ್ರಕಾಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವೀನ್ ಕೀರಲಾಹಳ್ಳಿ, ರಾಜ್ಯ ಸಂಪನ್ಮೂಲ ವ್ಯಕ್ತಿ ಮುನಿಸ್ವಾಮಿ, ಪ್ರಾಂಶುಪಾಲರು ಅಂತ್ಯೋದಯ ವಿದ್ಯಾಸಂಸ್ಥೆ ವಲಯ ಮೇಲ್ವಿಚಾರಕರಾದ ದಯಾನಂದ್ ವಲಯದ ಎಲ್ಲಾ ಸೇವಾಪ್ರತಿನಿಧಿಗಳು VLE ಗಳು ಸ್ವ ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ್, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx