ಪಾವಗಡ: ಹರಿಹರಪುರ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗುಡಿಸಲು ಸುಟ್ಟು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮತುಮಕೂರು ವರದಿಯ ಬೆನ್ನಲ್ಲೇ ನೈಜ್ಯ ಹೋರಾಟಗಾರ ವೇದಿಕೆ, ಬೆಂಗಳೂರು ಮತ್ತು ಕಾಳಜಿ ಪೌಂಡೇಶನ್ (ರಿ), ತುಮಕೂರು ಸಂಘಟನೆಗಳು ಅಧಿಕಾರಿಗಳ ಗಮನ ಸೆಳೆದು ಸಂತ್ರಸ್ತರಿಗೆ ಅಧಿಕಾರಿಗಳಿಂದ ತಕ್ಷಣದಲ್ಲಿ ಸ್ಪಂದನೆ ಸಿಗುವ ಕಾರ್ಯ ಮಾಡಿದೆ.
ಹರಿಹರಪುರ ಗ್ರಾಮದಲ್ಲಿ ಗುಡಿಸಲು ಬೆಂಕಿಗಾಹುತಿಯಾಗಿ ಬಡ ಕುಟುಂಬಗಳು ಬೀದಿಪಾಲಾಗಿರುವ ಬಗ್ಗೆ ನಮ್ಮತುಮಕೂರು ಸವಿವರವಾದ ವರದಿಯನ್ನ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ನೈಜ್ಯ ಹೋರಾಟಗಾರ ವೇದಿಕೆ, ಬೆಂಗಳೂರು ಮತ್ತು ಕಾಳಜಿ ಪೌಂಡೇಶನ್ (ರಿ), ತುಮಕೂರು ಸಂಘಟನೆಗಳು ತಹಶೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಸಂತ್ರಸ್ತರ ಸಮಸ್ಯೆಯ ತೀವ್ರತೆಯನ್ನ ಮನವರಿಕೆ ಮಾಡಿದ್ದಾರೆ.
ಈ ವೇಳೆ ತಕ್ಷಣದಲ್ಲೇ ಸ್ಪಂದಿಸಿದ ತಹಶೀಲ್ದಾರ್ ಅವರು, ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ನೈಜ್ಯ ಹೋರಾಟಗಾರ ವೇದಿಕೆ ಮತ್ತು ಕಾಳಜಿ ಪೌಂಡೇಶನ್ ತಂಡದ ಸಮಯ ಪ್ರಜ್ಞೆಯಿಂದ ಸಂತ್ರಸ್ತರಿಗೆ ನೆರವಿನ ಭರವಸೆ ದೊರೆಯಿತು. ಜನರು ಹಾಗೂ ಆಡಳಿತ ವ್ಯವಸ್ಥೆಯ ನಡುವೆ ಈ ಸಂಘಟನೆಗಳು ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಅಗ್ನಿ ಅವಘಡದಿಂದ ನೊಂದ ಕುಟುಂಬಸ್ಥರಿಗೆ ತುರ್ತಾಗಿ ಸ್ಪಂದಿಸಿದ ತಹಶೀಲ್ದಾರ್ ತಾತ್ಕಾಲಿಕ ಆಶ್ರಯ ಮತ್ತು ಆಹಾರ ವ್ಯವಸ್ಥೆ ಒದಗಿಸಿದ್ದಾರೆ. ಅವರಿಗೆ ನೈಜ್ಯ ಹೋರಾಟಗಾರರ ವೇದಿಕೆ ಬೆಂಗಳೂರು ಇದರ ಹಿರಿಯ ಹೋರಾಟಗಾರರಾದ ಹೆಚ್.ಎಂ.ವೆಂಕಟೇಶ್, ಕಾಳಜಿ ಪೌಂಡೇಶನ್ (ರಿ)ತುಮಕೂರು ಇದರ ನಟರಾಜು ಜಿ.ಎಲ್. ಅಭಿನಂದನೆಗಳನ್ನ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx