ಪಾವಗಡ : ಪಟ್ಟಣದಲ್ಲಿ ಅದ್ದೂರಿಯಾಗಿ ದಸರಾ ಉತ್ಸವ ಜರುಗಿದ್ದು, ತಾಲೂಕಿನ ದಂಡಾಧಿಕಾರಿಗಳಾದ ವರದರಾಜು ನೇತೃತ್ವದಲ್ಲಿ ರಾಜಬೀದಿಯಲ್ಲಿರುವ ಪುರಾತನ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ರಾಜಬೀದಿಗಳ ಮೂಲಕ ವಿವಿಧ ದೇವರುಗಳ ಸಹಿತ ಮೆರವಣಿಗೆ ಕೈಗೊಳ್ಳಲಾಯಿತು.
ನಂತರ ಗುರು ಭವನದ ಮೈದಾನದಲ್ಲಿರುವ ಬನ್ನಿಮಂಟಪಕ್ಕೆ ಆಗಮಿಸಿ ಬನ್ನಿ ಗಿಡಕ್ಕೆ ವಿಶೇಷ ಪೂಜೆಗಳನ್ನು ಸಲ್ಲಿಸಿ ನಂತರ ಸಂಪ್ರದಾಯದಂತೆ ಬಾಣವನ್ನ ಗಿಡದ ಬುಡಕ್ಕೆ ಬಿಡಲಾಯಿತು.
ಪಾವಗಡ ತಾಲೂಕಿನ ನೂರಾರು ಸಂಖ್ಯೆಯ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ವಿವಿಧ ಸಂಘ ಸಂಸ್ಥೆಗಳಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q