ಪಾವಗಡ: ಕೊಟ್ಯಾಂತರ ರೂ.ಗಳ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ತಾಲ್ಲೂಕಿನ ರಸ್ತೆಗಳು ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕರಾದ ವೆಂಕಟರಮಣಪ್ಪ ತಿಳಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ವಿರುಪಸಮುದ್ರ ಗ್ರಾಮದ ವಡಸಲಮ್ಮ ದೇವಸ್ಥಾನದ ಅವರಣದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ನುಡಿದಂತೆ ನಡೆಯುವವನು, ಆದರೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾದ ಆರ್.ಸಿ. ಅಂಜಿನಪ್ಪ, ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಯಾವಾಗಲೂ ಸುಳ್ಳು ಹೇಳುತ್ತಾ ತಾಲ್ಲೂಕನ್ನು ಅಭಿವೃದ್ದಿಪಡಿಸುತ್ತೇವೆ ಎಂದು ಸುಮ್ಮನೆ ಸಾರ್ವಜನಿಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜೆ.ಡಿ.ಎಸ್. ವಿರುದ್ದ ಕುಟುಕಿದರು.
ನಾನು ಪ್ರಾಮಾಣಿಕವಾಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿ ಗೊಳಿಸಿದ್ದು,2352 ಕೋಟಿ ಮೂಂಜುರು ಮಾಡಿದ್ದೇನೆ ಅದರೇ ನಾವೆ ಭದ್ರಾ ಮೇಲ್ದಂಡೆ ಮಂಜೂರು ಮಾಡಿದ್ದೇವೆ ಅಂತ ಸುಳ್ಳು ಹೇಳುತ್ತಾರೆ ಅವರ ಹೇಳಿಕೆಗಳು ಬರಿ ಸುಳ್ಳು, ಅವರ ಐದು ವರ್ಷಗಳ ಅವಧಿಯಲ್ಲಿನ ಅಭಿವೃದ್ದಿ ಮತ್ತು ನನ್ನ ಅವದಿಯಲ್ಲಿನ ಅಭಿವೃದ್ದಿ ಬಗ್ಗೆ ಚರ್ಚೆ ಮಾಡೋಣ ಎಂದು ಜೆ.ಡಿ.ಎಸ್.ನ ತಿಮ್ಮರಾಯಪ್ಪ ಅವರಿಗೆ ಸವಾಲೆಸೆದರು.
ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ 17 ಕೋಟಿಯಲ್ಲಿ ನಿರ್ಮಾಣವಾಗುತ್ತಿದ್ದು, ಈಗ ಸರ್ಕಾರಿ ಆಸ್ಪತ್ರೆಯ ನವೀಕರಣ ಮಾಡಲು 4 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದು ಇದೇ ವೇಳೆ ಅವರು ತಿಳಿಸಿದರು.
ಜೆ.ಡಿ.ಎಸ್. ಅಪ್ಪ ಮಕ್ಕಳ ಪಕ್ಷವಾಗಿದ್ದು, ಕುಟುಂಬ ರಾಜಕೀಯ ಮಾಡುತ್ತಿದ್ದಾರೆ. ಈ ಬಾರಿ 10 ರಿಂದ 20 ಸೀಟು ಗೆದ್ದು ನಾವೇ ಕಿಂಗ್ ಮೇಕರ್ ಎಂದು ಬೀಗುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದರು.
ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಚ್.ವಿ. ವೆಂಕಟೇಶ್ ಮಾತನಾಡಿ, ಮೂರು ದಿನಗಳ ಕಾಲ ತಾಲ್ಲೂಕಿನಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ನಮ್ಮ ತಂದೆ ಚಾಲನೆ ನೀಡಲಿದ್ದಾರೆ. ಬಿ.ಜೆ.ಪಿ. ಇರುವ ಶಾಸಕರ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದ್ದು, 40% ಪರ್ಸಂಟೇಜ್ ಬಿ.ಜೆ.ಪಿ. ಸರ್ಕಾರವಾಗಿದೆ. ನಮ್ಮ ತಂದೆಯವರು ಮುಖ್ಯಮಂತ್ರಿಗಳ ಬಳಿ ಜಗಳವಾಡಿ 65 ಕೋಟಿ ಅನುದಾನವನ್ನು ರಸ್ತೆಗಳ ಅಭಿವೃದ್ದಿಗೆ ಮಂಜೂರು ಮಾಡಿಸಿದ್ದಾರೆ ಎಂದರಲ್ಲದೇ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶಥ ಸಿದ್ದ ಎಂದು ಹೇಳಿದರು.
ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎನ್. ಶೇಷಗಿರಿ ಮಾತನಾಡಿದರು. ಮುಖಂಡರಾದ ಗುಮ್ಮಗಟ್ಟ ಶ್ರೀನಿವಾಸ್, ಅಕ್ಮ್ಮನಹಳ್ಳಿ ಆದಿನಾರಾಯಣ್, ವಿಶ್ವೇಶ್ವರೆಡ್ಡಿ, ಗುತ್ತಿಗೆದಾರರಾದ ಎ. ಶಂಕರರೆಡ್ಡಿ, ಮಾಜಿ ತಾ.ಪಂ. ಅಧ್ಯಕ್ಷ ವಿರುಪಸಮುದ್ರರಾಮಾಂಜಿನಪ್ಪ, ಲೋಕೋಪಯೋಗಿ ಇಲಾಖೆಯ ಎ.ಇ.ಇ. ಅನಿಲ್ಕುಮಾರ್, ಜಿ.ಪಂ. ಎ.ಇ.ಇ. ಸುರೇಶ್, ಇಂಜನಿಯರ್ ಬಸವಲಿಂಗಪ್ಪ, ವಿರುಪಸಮುದ್ರ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ, ಪಿ.ಡಿ.ಓ. ಚಿಕ್ಕಣ, ಮಾಜಿ ತಾ.ಪಂ. ಉಪಾದ್ಯಕ್ಷರಾದ ನಾಗರಾಜು, ಗುತ್ತಿಗೆದಾರರಾದ ಹನುಮಂತರಾಯ, ವಿಜಯಾರೆಡ್ಡಿ, ಮತ್ತಿತರರು ಹಾಜರಿದ್ದರು.
ಹಿಂದೂಪುರ–ಬಸವನಹಳ್ಳಿ ರಸ್ತೆ ಅಭಿವೃದ್ದಿಗೆ 25 ಲಕ್ಷ , ವಿರುಪಸಮುದ್ರ — ನಾಗಲಾಪುರ ರಸ್ತೆಗೆ 50 ಲಕ್ಷ, ಗುಮ್ಮಗಟ್ಟ– ಅಚ್ಚಮ್ಮನಹಳ್ಳಿ ರಸ್ತೆ 50 ಲಕ್ಷ, ವಿರುಪಸಮುದ್ರ ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ 2 ಕೋಟಿ 84 ಲಕ್ಷ ವೆಚ್ಚದಲ್ಲಿ ಜಲಜೀವನ್ ಮಿಶಿನ್ ಕುಡಿಯುವ ನೀರು ಯೋಜನೆ, ಮಾಚರಾಚನಹಳ್ಳಿ ಗೇಟ್ ನಿಂದ ಗುಮ್ಮಗಟ್ಟ– ಅಕ್ಕಮ್ಮನಹಳ್ಳಿ ರಸ್ತೆಯ ಅಭಿವೃದ್ದಿ 1 ಕೋಟಿ, 5 ಲಕ್ಷ್ಮ, ಬಸವನಹಳ್ಳಿ ಗ್ರಾಮದಲ್ಲಿ 10 ಲಕ್ಷ್ಮವೆಚ್ಚದಲ್ಲಿ ಸಮುದಾಯಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz