ಪಾವಗಡ: ಶಾಲಾ ಶಿಕ್ಷಣ ಇಲಾಖೆ ಪಾವಗಡದ ವತಿಯಿಂದ ಗುರುಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯ 10 ನೇ ತರಗತಿಯ ವಿದ್ಯಾರ್ಥಿ ಗಳಾದ ಜಯಶ್ರೀ ಬಿ. ಮತ್ತು ರಚನಾ ಎಂ. ಗುಂಪು ವಿಭಾಗದ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಮತ್ತು ವೈಯಕ್ತಿಕ ವಿಭಾಗದಲ್ಲಿ 10 ನೇ ತರಗತಿಯ ವಿದ್ಯಾರ್ಥಿ ಹೃತಿಕ್ ಹೆಚ್. ಕೂಡಾ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಸ್ಪರ್ಧೆಯು ದಿನಾಂಕ :09—12–2025 ರಂದು ಮಧುಗಿರಿಯಲ್ಲಿ ನಡೆಯಲಿದೆ, ವಿಜೇತ ವಿದ್ಯಾರ್ಥಿಗಳಿಗೆ ಪ್ರಭಾರಿ ಮುಖ್ಯಶಿಕ್ಷಕರಾದ ರೇಣುಕರಾಜ್ ಜಿ.ಹೆಚ್., ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರೇಮ್ ಕುಮಾರ್, ಉಪಾಧ್ಯಕ್ಷರಾದ ಕವಿತಮ್ಮ ಎಸ್.ಡಿ.ಎಂ.ಸಿ. ಸದಸ್ಯರು, ಸಹಶಿಕ್ಷಕರಾದ ಹನುಮೇಶ್ ಎನ್., ಮೋಹನ್ ಕುಮಾರ್ ಜಿ.ಕೆ., ಕುಮಾರ್ ಎಸ್., ಅಭಿಷೇಕ್ ಎಂ.ವಿ., ಶಿಕ್ಷಕಿಯರಾದ ವಿಮಲಾ ಆರ್.,ರಶ್ಮಿ ಸಿ.ಎಸ್., ಮಾನಸ, ಶ್ರೀಲಕ್ಷ್ಮೀ ಮತ್ತು ಸಮಸ್ತ ಪೋಷಕರು ಅಭಿನಂಧಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


