ಪಾವಗಡ: ತಾಲ್ಲೂಕಿನ ನಲ್ಲದಿಗಬಂಡೆ ತಾಂಡ ಗ್ರಾಮದಲ್ಲಿ ಗೋರ್ಸಿ ಕೋಡಿ ತಾಲೂಕು ಘಟಕ ವತಿಯಿಂದ ನಾಯಕಿರ್ಧನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯವನ್ನು ಸಂತ ಶ್ರೀ ಸೇವಾಲಾಲ್ ಭೋಕರ್ಯದ ಮೂಲಕ ಪ್ರಾರಂಭಿಸಲಾಯಿತು. ಪ್ರಾಸ್ತಾವಿಕ ನುಡಿ ರಮೇಶ್ ಬಾಬು ರಾತೋಡ್, ಈ ನಾಯಕಿರ್ಧನ್ ವಿಶೇಷತೆಯ ಬಗ್ಗೆ ತಿಳಿಸಿಕೊಟ್ಟರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಸಂತ್ ರಾವ್ ನಾಯಕ್ ರಾಥೋಡ್ 12 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿರುವ ನೆನಪಿಗೋಸ್ಕರ ದೇಶಾದ್ಯಂತ ಈ ದಿನವನ್ನು ನಾಯಕೀರ್ ಧನ್ ಆಚರಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ತಾಂಡಾದ ನಾಯಕ್ ಕಾರ್ಬಾರಿ ಶಂಕ್ರನಾಯಕ್ ಡಾವ ಪುಟ್ಟ ನಾಯಕ್, ಗೋರ್ಸಿಕ್ವಾಡಿ ತುಮಕೂರು ಜಿಲ್ಲಾ ಸಂಯೋಜಕರಾದ ವೆಂಕಟೇಶ್ ಚೌಹಾನ್, ಭೀಮಾಸತ್ತಿ ಗ್ರಾಮೀಣಾಭಿವೃದ್ಧಿ ಅಧ್ಯಕ್ಷರು ಹಾಗೂ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿಯಾದ ರಮೇಶ್ ಬಾಬು ರಾತೋಡ್, ಗೋರ್ಸೇನಾ ಪಾವಗಡ ತಾಲ್ಲೂಕು ಘಟಕ ಅಧ್ಯಕ್ಷರಾದ ಜಗದೀಶ್ ನಾಯಕ್ ಗೌರಾಧ್ಯಕ್ಷರಾದ ಗೋವಿಂದ ನಾಯಕ್, ಗೋರ್ಸಿಕ್ವಾಡಿ ತಾಲೂಕು ಸಂಚಾಲಕರಾದ ಪ್ರಕಾಶ್ ನಾಯಕ್, ತಾಲೂಕು ಅಕ್ಷರ ದಾಸೋಹ ಅಧಿಕಾರಿಯಾದ ಶಂಕ್ರಾಯಕ್ ,ತಾಂಡಾದ ಗ್ರಾಪಂ ಉಪಾಧ್ಯಕ್ಷರಾದ ಮುಕುಂದ ನಾಯಕ್, ಕ್ಯಾಮೆರಾ ಮ್ಯಾನ್ ವರದಾ ನಾಯಕ್ ಮತ್ತಿತದಾರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz