ಪಾವಗಡ : ಕ್ಷೇತ್ರಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಜೆಡಿಎಸ್ ಪಕ್ಷದ ಶಾಸಕರ ಕಾಲದಲ್ಲಿ ಆಗಿರುವ ಅಭಿವೃದ್ಧಿ ಮತ್ತು ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದ ಮತದಾರರು ತುಲನೆ ಮಾಡಿದ ನಂತರ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ತಾಲ್ಲೂಕಿನ ನಿಡಗಲ್ ಹೋಬಳಿಯ ಗುಜ್ಜನಡು, ಮಂಗಳವಾಡ ಹಾಗೂ ಅರಸೀಕೆರೆ ಗ್ರಾಮ ಪಂಚಾಯತಿ ಭಾಗದಲ್ಲಿ ಗುರುವಾರ ಜಲಜೀವನ್ ಯೋಜನೆ ಮತ್ತು ಶಾಸಕರ ಪ್ರಾದೇಶಿಕ ಅಭಿವೃದ್ಧಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಅನುದಾನದ ಅಡಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಗುಜ್ಜನಡು ಗ್ರಾಮದಿಂದ ಚಿನ್ನಮ್ಮನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ 1.50 ಕೋಟಿ, ಮದ್ದೆ ಗ್ರಾಮದಿಂದ ಸ್ವಾರಮ್ಮನ ದೇವಸ್ಥಾನ ಮಾರ್ಗದ ರಸ್ತೆ ಅಭಿವೃದ್ಧಿಗೆ 50 ಲಕ್ಷ, ಪಾವಗಡ ಮತ್ತು ಅರಸೀಕೆರೆಯ ಮುಖ್ಯ ರಸ್ತೆಯಿಂದ ಪೆಮ್ಮನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ 25 ಲಕ್ಷ, ಮರೂರು ಮತ್ತು ಹೊಸಹಳ್ಳಿ ರಸ್ತೆ ಅಭಿವೃದ್ಧಿಗೆ 25 ಲಕ್ಷ, ಮಂಗಳವಾಡ ಗ್ರಾಮದಲ್ಲಿ ನಾಡಕಚೇರಿ ಕಟ್ಟಡಕ್ಕಾಗಿ 24 ಲಕ್ಷ ಹಾಗೂ ಮಡಿವಾಳ ಕಾಲೋನಿಯಲ್ಲಿರುವ ಶ್ರೀ ಲಕ್ಷ್ಮಿ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣಕ್ಕಾಗಿ 5 ಲಕ್ಷ ನೀಡಲಾಗಿದೆ. ಜಲಜೀವನ್ ಯೋಜನೆ ಅಡಿಯಲ್ಲಿ ಗುಜ್ಜನಡು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಗ್ರಾಮಗಳಾದ ಗೌಡಕಾರನಹಟ್ಟಿಗೆ 29.70 ಲಕ್ಷ, ಜೋಗದಹಟ್ಟಿ 69.50 ಎ ಹೆಚ್ ಪಾಳ್ಯ 29.80 ಲಕ್ಷ ಸಿ ಆರ್ ಪಾಳ್ಯ 49.70 ಲಕ್ಷ, ಸಿ.ಹೆಚ್.ಪಾಳ್ಯ 55.20 ಲಕ್ಷ , ಟಿಎನ್ ಬೆಟ್ಟ 82.60 ಲಕ್ಷ, ಯರ್ರಮ್ಮನಹಟ್ಟಿ 20.20 ಲಕ್ಷ, ಗುಜ್ಜನಡು ಎಕೆಸಿ 58.30 ಲಕ್ಷ , ಚಿನ್ನಮ್ಮನಹಳ್ಳಿ ಮತ್ತು ಚಿನ್ನಮ್ಮನಹಳ್ಳಿ ಬೋವಿ ಹಾಗೂ ಮುತ್ತರಾಯನ ಕಾಲೋನಿಗೆ 69.10 ಲಕ್ಷ ದವಡಬೆಟ್ಟ ಮತ್ತು ದವಡಬೆಟ್ಟ ತಾಂಡಕ್ಕೆ 85 ಲಕ್ಷ ನೀಡಲಾಗಿದೆ ಎಂದು ಇದೇ ವೇಳೆ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ್, ವರದರಾಜ್ ತಹಶಿಲ್ದಾರ ಪಾವಗಡ, ಎಪಿಎಂಸಿ ಮಾಜಿ ಅಧ್ಯಕ್ಷ ಡಿಮಂಜುನಾಥ್, ಕೆ.ಹೆಚ್.ಪ್ರಕಾಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋಪಿ, ಸ್ವಾರಣ್ಣ, ನಂಜುಂಡಯ್ಯ ಶೆಟ್ಟಿ, ಭೋಜರಾಜ್, ಮುಗದಾಳ ಬೆಟ್ಟ ನರಸಿಂಹಯ್ಯ, ಕೆ.ಟಿ.ಹಳ್ಳಿ ಚಿಕ್ಕಣ್ಣ, ಶಂಕರ್ ರೆಡ್ಡಿ, ಪುರಸಭಾ ಸದಸ್ಯ ರಾಜೇಶ್, ಗ್ರಾ.ಪಂ. ಅಧ್ಯಕ್ಷೆ ಮಧು ನಾಗಭೂಷಣ್, ಮಾಜಿ ಅಧ್ಯಕ್ಷ ಮೂರ್ತಿ, ಮುಖಂಡ ಮೂಡಲಗಿರಿಯಪ್ಪ, ವಿರೇಶ್, ವಡ್ಡಗೇರಮ್ಮ, ಪೆಮ್ಮನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಉಜ್ಜಿನಪ್ಪ , ನಾಗಮ್ಮ, ಮುಖಂಡರಾದ ದೊಡ್ಡೇಗೌಡ, ಶಿಲ್ಪಾಚಾರಿ, ಪಿ.ಜಿ.ನರಸಿಂಹಯ್ಯ ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz