ಪಾವಗಡ ಕುರುಬರಹಳ್ಳಿ ಗೇಟ್ ಬಳಿ ಇರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆಗೆ ಗುರುವಾರ ಮೂರು ಜನರ ನ್ಯಾಕ್ ತಂಡ ಭೇಟಿ ನೀಡಿ ಕಾಲೇಜಿನ ಸಂಪೂರ್ಣ ಮಾಹಿತಿ ಪಡೆಯುವುದರ ಜೊತೆಗೆ ಶೈಕ್ಷಣಿಕ ಗುಣಮಟ್ಟ ವಿದ್ಯಾರ್ಥಿಗಳ ಜೊತೆ ಸಂವಾದ ಪೋಷಕರ ಜೊತೆ ಸಂವಾದ ಹಾಗೂ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ನ್ಯಾಕ್ ತಂಡದ ಚೇರ್ ಪರ್ಸನ್, ದೇವಶೀಶ್ ಭಟ್ಟಾಚಾರ್ಯ ಜಿ , ಡಾ, ರೇಖಾ ಪಾಂಡೆ, ಡಾ,ಮಂಜುಶ್ರೀ, ರವರ ತಂಡ ಭಾಗವಹಿಸಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ.
ಈ ಒಂದು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಒ.ಮಾರಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಮೈಲಪ್ಪ, ಸಣ್ಣರಾಮರೆಡ್ಡಿ, ಮಾರಣ್ಣ,ಕೆ.ವಿ.ಶ್ರೀನಿವಾಸ್, ಶ್ರೀಧರ್ ಗುಪ್ತಾ, ಕಾಲೇಜಿನ ಪದ್ಮನಾಭ, ರಾಮಾಂಜಿನಮ್ಮ ಪಿ.ಓ., ಮಧುಕುಮಾರ್ ಎಂ., ನಾಗರಾಜು ಎಚ್., ರಾಜಣ್ಣ, ಕಿರಣ್ ಸಿ.ಕೆ., ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಮಮತಾ ಎಂ., ಮಿನು, ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1