ನಟ ಕಿಶೋರ್ ಹಾಗೂ ಪೃಥ್ವಿ ಅಂಬರ್ ಅವರ ನಟನೆಯ ಪೆಂಟಗನ್ ಚಿತ್ರದ ಟೀಸರ್ ಬಿಡುಗಡೆ ವೇಳೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಅಶ್ವಿನಿ ಗೌಡ ವೇದಿಕೆಯಲ್ಲೇ ಚಿತ್ರದ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಸರ್ ನಲ್ಲಿ ಕನ್ನಡ ಹೋರಾಟಗಾರರನ್ನು ಕೆಟ್ಟದಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಹೋರಾಟಗಾರರಿಗೆ ರೋಲ್ ಕಾಲ್ ಅನ್ನೋ ಪದವನ್ನು ಬಳಸಿರುವುದು ರೂಪೇಶ್ ರಾಜಣ್ಣ ಅಸಮಾಧಾನಕ್ಕೆ ಕಾರಣವಾಗಿದೆ.
ವೇದಿಕೆಯ ಮೇಲೆಯೇ ಈ ಪದವನ್ನು ತೆಗೆದು ಹಾಕುವಂತೆ ರೂಪೇಶ್ ರಾಜಣ್ಣ ನಿರ್ಮಾಪಕ ಗುರುದೇಶಪಾಂಡೆ ಅವರನ್ನು ಒತ್ತಾಯಿಸಿದರು. ಮತ್ತೋರ್ವ ಹೋರಾಟಗಾರ್ತಿ ಅಶ್ವಿನಿ ಗೌಡ ಕೂಡ ಈ ಪದದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ, ಟೀಸರ್ ನೋಡಿ ಏನನ್ನೂ ಮಾತನಾಡಬೇಡಿ, ಸಂಪೂರ್ಣ ಚಿತ್ರವನ್ನು ನೋಡಿ ಎಂದು ಇಬ್ಬರ ಮನವೊಲಿಸಿದರು. ಇದರ ಹೊರತಾಗಿಯೂ ಟೀಸರ್ ನಿಂದ ರೋಲ್ ಕಾಲ್ ಪದ ತೆಗೆದು ಹಾಕದಿದ್ದರೆ ಗುರು ದೇಶಪಾಂಡೆ ಕಚೇರಿಗೆ ಮುತ್ತಿಗೆ ಹಾಕುವುದಾಘಿ ಕನ್ನಡ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1